Thursday, 12th December 2024

ಕಬಡ್ಡಿ ಆಡುವ ವೇಳೆ ಹೃದಯಾಘಾತ: ಎಸ್‍ಐ ಸಾವು

ತಿರುಪತಿ: ಕಬಡ್ಡಿ ಆಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಎಸ್‍ಐ ಮೃತಪಟ್ಟಿದ್ದಾರೆ.

ಮಲ್ಲಂಗುಂಟ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿಯಂದು ಕಬ್ಬಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ಪಡಮರ ಪೊಲೀಸ್ ಠಾಣೆಯ ಎಂ.ಸುಬ್ರಹ್ಮಣ್ಯ(57) ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದು, ಪಂದ್ಯಾವಳಿ ನಡೆ ಯುತ್ತಿದ್ದ ವೇಳೆ ಎದುರಾಳಿ ಅಖಾಡಕ್ಕೆ ತೆರಳಿದ್ದಾರೆ. ಅಖಾಡದಿಂದ ಹೊರಬರುತ್ತಿದ್ದಾಗ ಎದೆನೋವು ಕಾಣಿಸಿ ಕೊಂಡು ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರನ್ನು ಪರಿಶೀಲಿಸಿದ ವೈದ್ಯರು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ.

1984 ಪೊಲೀಸ್ ವೃತ್ತಿ ಜೀವನ ಆರಂಭಿಸಿದ ಇವರಿಗೆ 2019ರಲ್ಲಿ ಎಸ್‍ಐ ಆಗಿ ಬಡ್ತಿ ಸಿಕ್ಕಿತ್ತು. ಸುಬ್ರಹ್ಮಣ್ಯ ಅವರು ಹೆಂಡತಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.