Sunday, 15th December 2024

ಸಿಧು ಮೂಸ್ ವಾಲಾ ಹತ್ಯೆ ಪ್ರಕರಣ: ದೀಪಕ್ ಮುಂಡಿ ಬಂಧನ

ಚಂಡೀಗಢ: ಪಂಜಾಬಿನ ಗಾಯಕ, ಕಾಂಗ್ರೆಸ್‌ ಮುಖಂಡ ಸಿಧು ಮೂಸ್ ವಾಲಾ ಹತ್ಯೆ ಪ್ರಕರಣದ ಆರೋಪಿ ಶೂಟರ್ ದೀಪಕ್ ಮುಂಡಿಯನ್ನು ಪಂಜಾಬ್ ಪೊಲೀಸರು ಪಶ್ಚಿಮ ಬಂಗಾಳ-ನೇಪಾಳ ಗಡಿಯಲ್ಲಿ ಬಂಧಿಸಿದ್ದಾರೆ.

ಕಾರ್ಯಾಚರಣೆ ಸಂದರ್ಭದಲ್ಲಿ ಇಬ್ಬರು ಸಹಚರರಾದ ಕಪಿಲ್ ಪಂಡಿತ್ ಮತ್ತು ರಾಜಿಂದರ್ ಅವರನ್ನು ಸಹ ಬಂಧಿಸಲಾಗಿದೆ ಎಂದು ವರದಿ ಮಾಡಿವೆ.

ಪಂಜಾಬ್ ಪೊಲೀಸರು, ಕೇಂದ್ರ ಏಜೆನ್ಸಿಗಳು ಮತ್ತು ದೆಹಲಿ ಪೊಲೀಸರ ಜಂಟಿ ಕಾರ್ಯಾ ಚರಣೆಯಲ್ಲಿ, ಇಬ್ಬರು ಸಹಚರ ರೊಂದಿಗೆ ಪರಾರಿಯಾಗಿದ್ದ ಸಿಧು ಮೂಸ್ ವಾಲಾ ಶೂಟರ್ ದೀಪಕ್ ಅಲಿಯಾಸ್ ಮುಂಡಿಯನ್ನು ಬಂಧಿಸಲಾಗಿದೆ.

ಸಿಧು ಮೂಸೆವಾಲಾ ಹತ್ಯೆಯಲ್ಲಿ ದೀಪಕ್ ಶೂಟರ್ ಆಗಿದ್ದ, ಕಪಿಲ್ ಪಂಡಿತ್ ಮತ್ತು ರಾಜಿಂದರ್ ಶಸ್ತ್ರಾಸ್ತ್ರಗಳು ಮತ್ತು ಅಡಗುತಾಣಗಳ ಬೆಂಬಲವನ್ನು ಒದಗಿಸಿದ್ದಾರೆ.” ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ ಎನ್ನಲಾಗಿದೆ.

ಆರೋಪಿಗಳು ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಅವರೊಂದಿಗೆ ಕಳೆದ ಕೆಲವು ದಿನಗಳಿಂದ ಸಿಗ್ನಲ್ ಅಪ್ಲಿಕೇಶನ್ ಮೂಲಕ ನೇರವಾಗಿ ಸಂಪರ್ಕದಲ್ಲಿದ್ದಾರೆ.