ಇಸ್ಲಾಂ ಧರ್ಮ ಸ್ವೀಕರಿಸಿ ಲಾಹೋರ್ ಮೂಲದ ವ್ಯಕ್ತಿ ಮೊಹಮ್ಮದ್ ಇಮ್ರಾನ್ರನ್ನು ಮದುವೆಯಾದ ಹೊರತಾಗಿಯೂ ಕೋಲ್ಕತ್ತಾದ ಮಹಿಳೆಗೆ ಪಾಕಿಸ್ತಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಮಹಿಳೆಯು ವಾಘಾ – ಅಟ್ಟಾರಿ ಅಂತಾ ರಾಷ್ಟ್ರೀಯ ಸಿಖ್ ಜಾಥಾ ಹಿಂದಿರುಗುವ ವೇಳೆ ಭಾರತಕ್ಕೆ ಮರಳಿದ್ದಾಳೆ.
ಮೊಹಮ್ಮದ್ ಇಮ್ರಾನ್ ಜೊತೆಯಲ್ಲಿ ರಂಜಿತಾ ಕೌರ್ ಸೋಶಿಯಲ್ ಮೀಡಿಯಾದ ಮೂಲಕ ಸಂಪರ್ಕ ಹೊಂದಿದ್ದಳು ಎನ್ನ ಲಾಗಿದೆ. ಇಸ್ಲಾಂ ಧರ್ಮಕ್ಕೆ ಮತಾಂತರ ವಾಗುವ ವೇಳೆ ರಂಜಿತಾ ತನ್ನ ಹೆಸರು ಪರ್ವೀನಾ ಸುಲ್ತಾನಾ ಎಂದು ಮರುನಾಮಕರಣ ಮಾಡಿಕೊಂಡಿದ್ದಳು.
ಸಿಖ್ ಧರ್ಮದ ಪತಿಯ ಸಮ್ಮುಖದಲ್ಲಿಯೇ ಮೊಹಮ್ಮದ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಳು ಎನ್ನಲಾಗಿದೆ. ಮೊಹಮ್ಮದ್ ಇಮ್ರಾನ್ ರಾಜನ್ಪುರ್ ನಿವಾಸಿಯಾಗಿ ದ್ದಾನೆ.
ನ. 23ರಂದು ರಂಜಿತ್ ಕೌರ್ ಹಾಗೂ ಇಮ್ರಾನ್ ಲಾಹೋರ್ನಲ್ಲಿ ನಿಖಾ ಮಾಡಿಕೊಂಡಿದ್ದಾರೆ. ಇದಾದ ಬಳಿಕ ರಂಜಿತ್ ಕೌರ್ ತನ್ನ ಸಿಖ್ ಧರ್ಮದ ಪತಿಗೆ ಪಾಕಿಸ್ತಾನದ ನ್ಯಾಯಾಲಯದಲ್ಲಿ ವಿಚ್ಛೇದನ ನೀಡಿದ್ದಾರೆ ಎಂದು ವರದಿಯಾಗಿದೆ.