Sunday, 15th December 2024

ಪಾಕಿಸ್ತಾನದವನನ್ನು ವರಿಸಿದ ಸಿಖ್ ವಿವಾಹಿತೆ

ಕೋಲ್ಕತ್ತಾ: ಸಿಖ್​ ಜಾಥಾದೊಂದಿಗೆ ಸಿಖ್ಖರ ಮೊದಲ ಗುರು ಗುರುನಾನಕ್​​ರ ಜನ್ಮ ವಾರ್ಷಿಕೋತ್ಸವ ಆಚರಿಸಲು ಪಾಕಿಸ್ತಾನಕ್ಕೆ ತೆರಳಿದ್ದ ಕೋಲ್ಕತ್ತಾ ಮೂಲದ ವಿವಾಹಿತೆ ಇಸ್ಲಾಂ ಧರ್ಮ ಸ್ವೀಕರಿಸಿ ಲಾಹೋರ್​ ಮೂಲದ ವ್ಯಕ್ತಿಯನ್ನು ವಿವಾಹವಾದ ಆಘಾತಕಾರಿ ಘಟನೆ ನಡೆದಿದೆ.

ಇಸ್ಲಾಂ ಧರ್ಮ ಸ್ವೀಕರಿಸಿ ಲಾಹೋರ್​​ ಮೂಲದ ವ್ಯಕ್ತಿ ಮೊಹಮ್ಮದ್​ ಇಮ್ರಾನ್​​ರನ್ನು ಮದುವೆಯಾದ ಹೊರತಾಗಿಯೂ ಕೋಲ್ಕತ್ತಾದ ಮಹಿಳೆಗೆ ಪಾಕಿಸ್ತಾನದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಮಹಿಳೆಯು ವಾಘಾ – ಅಟ್ಟಾರಿ ಅಂತಾ ರಾಷ್ಟ್ರೀಯ ಸಿಖ್​ ಜಾಥಾ ಹಿಂದಿರುಗುವ ವೇಳೆ ಭಾರತಕ್ಕೆ ಮರಳಿದ್ದಾಳೆ.

ಮೊಹಮ್ಮದ್​ ಇಮ್ರಾನ್​ ಜೊತೆಯಲ್ಲಿ ರಂಜಿತಾ ಕೌರ್​ ಸೋಶಿಯಲ್ ಮೀಡಿಯಾದ ಮೂಲಕ ಸಂಪರ್ಕ ಹೊಂದಿದ್ದಳು ಎನ್ನ ಲಾಗಿದೆ. ಇಸ್ಲಾಂ ಧರ್ಮಕ್ಕೆ ಮತಾಂತರ ವಾಗುವ ವೇಳೆ ರಂಜಿತಾ ತನ್ನ ಹೆಸರು ಪರ್ವೀನಾ ಸುಲ್ತಾನಾ ಎಂದು ಮರುನಾಮಕರಣ ಮಾಡಿಕೊಂಡಿದ್ದಳು.

ಸಿಖ್​ ಧರ್ಮದ ಪತಿಯ ಸಮ್ಮುಖದಲ್ಲಿಯೇ ಮೊಹಮ್ಮದ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಳು ಎನ್ನಲಾಗಿದೆ. ಮೊಹಮ್ಮದ್​ ಇಮ್ರಾನ್​ ರಾಜನ್​ಪುರ್​ ನಿವಾಸಿಯಾಗಿ ದ್ದಾನೆ.

ನ. 23ರಂದು ರಂಜಿತ್​ ಕೌರ್​​ ಹಾಗೂ ಇಮ್ರಾನ್ ಲಾಹೋರ್​ನಲ್ಲಿ ನಿಖಾ ಮಾಡಿಕೊಂಡಿದ್ದಾರೆ. ಇದಾದ ಬಳಿಕ ರಂಜಿತ್​ ಕೌರ್​ ತನ್ನ ಸಿಖ್​ ಧರ್ಮದ ಪತಿಗೆ ಪಾಕಿಸ್ತಾನದ ನ್ಯಾಯಾಲಯದಲ್ಲಿ ವಿಚ್ಛೇದನ ನೀಡಿದ್ದಾರೆ ಎಂದು ವರದಿಯಾಗಿದೆ.