Saturday, 14th December 2024

ಸಿಕ್ಕಿಂನಲ್ಲಿ 4.8 ತೀವ್ರತೆಯ ಭೂಕಂಪ

ಸಿಕ್ಕಿಂ : ರಾಜ್ಯದ ಯುಕ್ಸಮ್ ಬಳಿ ಗುರುವಾರ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ನ್ಯಾಷನಲ್ ಸೆಂಟರ್ ಫಾರ್ ಸೀಸಮ್ಮ್ಯಾಜಿ ಪ್ರಕಾರ, ಸಿಕ್ಕಿಂನ ಯುಕ್ಸೋಮ್ ನಲ್ಲಿ ಸಾಧಾರಣ ತೀವ್ರತೆಯ ಭೂಕಂಪದ ಅನುಭವವಾಗಿದೆ.

ಭೂಕಂಪದಿಂದ ಯಾವುದೇ ಸಾವು-ನೋವು ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಬುಧವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಲಘು ಭೂಕಂಪ ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ 4.5 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು.