ರಜೌರಿ: ನೌಶೇರಾದ ನಿವಾಸಿ ಸಿಮ್ರಾನ್ ಬಾಲಾ ಅವರು ಕೇಂದ್ರ ಲೋಕಸೇವಾ ಆಯೋಗದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಪರೀಕ್ಷೆಯಲ್ಲಿ ತೇರ್ಗಡೆಯಾದ ರಾಜ್ಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಯುಪಿಎಸ್‌ಸಿ ಸಿಎಪಿಎಫ್ಗೆ ಅರ್ಹತೆ ಪಡೆದ 151 ಅಭ್ಯರ್ಥಿಗಳಲ್ಲಿ ಅವರು 82ನೇ ರ‍್ಯಾಂಕ್ ಪಡೆದು ಇತಿಹಾಸ ನಿರ್ಮಿಸಿದ್ದಾರೆ.
“ನನ್ನ ಕನಸು ನನಸಾಗಿದೆ. ನಾನು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸಹಾಯಕ ಕಮಾಂಡೆಂಟ್ ಆಗಿ ನೇಮಕ ಗೊಂಡಿದ್ದೇನೆ. ನಾನು ನನ್ನ ಕರ್ತವ್ಯ ವನ್ನು ಸಂಪೂರ್ಣ ಉತ್ಸಾಹದಿಂದ ನಿರ್ವಹಿಸುತ್ತೇನೆ. ನನ್ನ ಯಶಸ್ಸಿನ ಬಗ್ಗೆ ನನ್ನ ಕುಟುಂಬ ಮತ್ತು ನನ್ನ ನೆರೆಹೊರೆಯವರು ಹೆಮ್ಮೆಪಡುತ್ತಾರೆ” ಎಂದು ಅವರು ಹೇಳಿದರು.
“ನಾನು ಇಲ್ಲಿ 10ನೇ ತರಗತಿಯವರೆಗೆ ಓದಿದ್ದೇನೆ. ನಂತರ ನನ್ನ ಉನ್ನತ ಮಾಧ್ಯಮಿಕ ಶಿಕ್ಷಣಕ್ಕಾಗಿ ಜಮ್ಮುವಿಗೆ ಹೋದೆ. ಪದವಿಯನ್ನು ಗಾಂಧಿನಗರದಲ್ಲಿ ಪೂರ್ಣಗೊಳಿಸಿದೆ. ಈ ಪರೀಕ್ಷೆಗೆ ತಯಾರಿ ಆರಂಭಿಸಿದಾಗ ನಾನು ಕೊನೆಯ ಸೆಮಿಸ್ಟರ್‌ನಲ್ಲಿದ್ದೆ. ದೇವರ ದಯೆಯಿಂದ ಮೊದಲ ಪ್ರಯತ್ನದಲ್ಲಿ ಪಾಸಾ ಗಿದ್ದೇನೆ. ನನ್ನ ಪೋಷಕರು, ಶಿಕ್ಷಕರು ಮತ್ತು ಅನೇಕ ಜನರು ನನಗೆ ಪ್ರೋತ್ಸಾಹ ನೀಡಿದರು ಎಂದು ಹೇಳಿದರು.