ಸಾವಿರಾರು ಮಕ್ಕಳನ್ನು ಭಿಕ್ಷೆ ಬೇಡಿ ಸಾಕಿದ್ದರು. ಅದರ ಜೊತೆಗೆ ಆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ದ್ದರು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಡಿ. 24 ರಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಮಂಗಳವಾರ ರಾತ್ರಿ ಅವರಿಗೆ ಹೃದಯಾ ಘಾತವೂ ಸಂಭವಿಸಿ, ನಿಧನರಾಗಿದ್ದಾರೆ. ಮಧ್ಯಾಹ್ನವೇ ತೋಸರ್ ಪಾಗಾ ರುದ್ರಭೂಮಿಯಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಆಶ್ರಮದ ಮೂಲಗಳು ತಿಳಿಸಿವೆ.
ಸಿಂಧೂತಾಯಿ ಮದುವೆಯಾದ ಹೊಸತರಲ್ಲಿ ಸಾಕಷ್ಟು ದೌರ್ಜನ್ಯಕ್ಕೆ ಒಳಗಾಗಿದ್ದವರು. ಬಳಿಕ ಭಿಕ್ಷಾಟನೆ ಮಾಡಿ ಸಾವಿರಾರು ಅನಾಥ ಮಕ್ಕಳಿಗೆ ತಾಯಿ ಯಾಗಿದ್ದವರು. ಇವರ ಸೇವೆ 750 ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. 2021ರಲ್ಲಿ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯೂ ಸಿಕ್ಕಿದೆ.