Thursday, 12th December 2024

ಸಿಂಗಾಪೂರ ತಳಿ ವಿವಾದ: ’ಟೀಕಾ’ಹಾರವಾದ ಕೇಜ್ರಿವಾಲ್‌

ನವದೆಹಲಿ: ಸಿಂಗಾಪುರವು ಬುಧವಾರ ಭಾರತೀಯ ರಾಯಭಾರಿಯನ್ನು ಕರೆದು ದೆಹಲಿ ಮುಖ್ಯಮಂತ್ರಿ ಅವರ ‘ಸಿಂಗಾಪುರ್ ರೂಪಾಂತರ’ ಕುರಿತ ಹೇಳಿಕೆಗೆ ‘ಬಲವಾದ ಆಕ್ಷೇಪಣೆ’ ವ್ಯಕ್ತಪಡಿಸಿದೆ ಎಂದು ಸರ್ಕಾರ ಹೇಳಿದೆ.

ವಿದೇಶಾಂಗ ಸಚಿವ ಎಸ್​. ಜೈಶಂಕರ್ ಅವರು ಭಾರತ ಮತ್ತು ಸಿಂಗಾಪುರ ಸಂಬಂಧವನ್ನು ಶ್ಲಾಘಿಸುತ್ತಾ, ದೆಹಲಿ ಸಿಎಂ ಕೇಜ್ರಿವಾಲ್ ಅವರು ಭಾರತಕ್ಕಾಗಿ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಲಾಜಿಸ್ಟಿಕ್ಸ್ ಹಬ್ ಮತ್ತು ಆಮ್ಲ ಜನಕ ಪೂರೈಕೆದಾರ ರಾಗಿ ಸಿಂಗಾಪುರದ ಪಾತ್ರವನ್ನು ಶ್ಲಾಘಿಸಬೇಕು. ಬೇಜವಾಬ್ದಾರಿ ಟೀಕೆಗಳು ದೀರ್ಘಕಾಲದ ಸಂಬಂಧವನ್ನು ಹಾನಿಗೊಳಿಸುತ್ತವೆ ಎಂಬುದನ್ನು ಟೀಕೆ ಮಾಡುವವರು ತಿಳಿದು ಕೊಳ್ಳಬೇಕು. ಆದ್ದರಿಂದ, ದೆಹಲಿ ಸಿಎಂ ಭಾರತಕ್ಕಾಗಿ ಮಾತನಾಡುವುದಿಲ್ಲ,”ಎಂದು ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಅವರು ಟ್ವೀಟ್ ಮಾಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಿಂಗಾಪುರದೊಂದಿಗಿನ ಎಲ್ಲಾ ವಾಯು ಸೇವೆಗಳನ್ನು ತಕ್ಷಣವೇ ರದ್ದು ಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಸಿಂಗಾಪುರದಲ್ಲಿ ಕಂಡುಬಂದಿರುವ ಹೊಸ ರೂಪಾಂತರಿ ಕೊರೋನಾ ವೈರಸ್ ಮಕ್ಕಳಿಗೆ ಮೇಲೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದರು.

ಸಿಂಗಪುರದಲ್ಲಿ ಕಂಡುಬಂದಿರುವ ಕರೋನಾ ವೈರಸ್‌ನ ತಳಿ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೀಡಿರುವ ಹೇಳಿಕೆಗೆ ಸಿಂಗಪುರ ಸರ್ಕಾರ ಕಟುವಾದ ಮಾತುಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿತು. ಇನ್ನೊಂದೆಡೆ, ಸಿಂಗಪುರ ಸರ್ಕಾರದಿಂದ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು, ‘ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಹೇಳಿಕೆ ಭಾರತದ ನಿಲುವನ್ನು ಪ್ರತಿನಿಧಿಸುವುದಿಲ್ಲ’ ಎಂದು ಹೇಳಿದ್ದಾರೆ.

ಭಾರತ ನಡೆಸುತ್ತಿರುವ ಹೋರಾಟಕ್ಕೆ ಸಿಂಗಪುರ ಬೆಂಬಲ ನೀಡುತ್ತಿದೆ. ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಅಗತ್ಯ ವೈದ್ಯಕೀಯ ಪರಿಕರಗಳು ಹಾಗೂ ಆಮ್ಲಜನಕ ಸಿಲಿಂಡರ್‌ಗಳು, ಕಾನ್ಸಂಟ್ರೇಟರ್‌ ಗಳನ್ನು ಕಳಿಸುವ ಮೂಲಕ ಸಿಂಗಪುರ ಭಾರತದ ಹೋರಾಟಕ್ಕೆ ಕೈಜೋಡಿಸಿದೆ’ ಎಂದು ಜೈಶಂಕರ್‌ ಪ್ರಶಂಸಿಸಿದ್ದಾರೆ.

‘ಸಿಂಗಪುರದಲ್ಲಿ ಕಂಡು ಬಂದಿರುವ ಕೊರೊನಾ ವೈರಸ್‌ನ ತಳಿ ಮಕ್ಕಳಿಗೆ ಬಹಳ ಅಪಾಯಕಾರಿಯಾಗಿದೆ. ಈ ತಳಿ ಭಾರತದಲ್ಲಿ ಕೋವಿಡ್‌ನ ಮೂರನೇ ಅಲೆಗೆ ಕಾರಣವಾಗಬಹುದು’ ಎಂದು ಕೇಜ್ರಿವಾಲ್‌ ಮಂಗಳವಾರ ಹೇಳಿದ್ದರು.