Saturday, 14th December 2024

ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನ ಮೇ 1 ರವರೆಗೆ ವಿಸ್ತರಣೆ

ವದೆಹಲಿ: ಸಿಬಿಐ ಮತ್ತು ಇಡಿ ಪ್ರಕರಣಗಳಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಸೋಮವಾರ ಮೇ 1 ರವರೆಗೆ ವಿಸ್ತರಿಸಿದೆ.

ಸಿಸೋಡಿಯಾ ಅಬಕಾರಿ ಇಲಾಖೆಯ ಮುಖ್ಯಸ್ಥರಾಗಿದ್ದು, ಹೊಸ ಮದ್ಯ ನೀತಿಯನ್ನ ರೂಪಿಸುವಾಗ ಮತ್ತು ಜಾರಿಗೆ ತರುವಾಗ ಅಕ್ರಮಗಳನ್ನ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಅಡಿಯಲ್ಲಿ ಕೆಲವು ಮಾರಾಟಗಾರರಿಗೆ ಅನುಕೂಲ ವಾಗಿದೆ ಎಂದು ಆರೋಪಿಸಲಾಗಿದೆ.