Thursday, 12th December 2024

ಇಂದಿನಿಂದ ತಾಂಜಾನಿಯಾಗೆ ಎಸ್.ಜೈಶಂಕರ್ ಭೇಟಿ

ವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಜುಲೈ 5 ರಿಂದ ಅಂದರೆ ಇಂದಿನಿಂದ ತಾಂಜಾನಿಯಾಗೆ ಭೇಟಿ ನೀಡಲಿದ್ದಾರೆ. ವಿದೇಶಾಂಗ ಸಚಿವರು ಜು.5 ರಿಂದ 8 ರವರೆಗೆ ತಾಂಜಾನಿಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಈ ವಿವರ ಗಳನ್ನು ವಿದೇ ಶಾಂಗ ಸಚಿವಾಲಯ ಹಂಚಿಕೊಂಡಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಎಸ್ ಜೈಶಂಕರ್ ಅವರು ಜು.5 ರಿಂದ 6 ರವರೆಗೆ ಮೊದಲು ಜಂಜಿಬಾರ್‌ ಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಭಾರತ ಸರ್ಕಾರದ ಕ್ರೆಡಿಟ್ ಲೈನ್ ಅನುದಾನಿತ ನೀರು ಸರಬರಾಜು ಯೋಜನೆಯನ್ನು ಸೂಕ್ಷ್ಮ ವಾಗಿ ಗಮನಿಸಲಿದ್ದಾರೆ. ಉನ್ನತ ನಾಯಕರನ್ನೂ ಭೇಟಿ ಮಾಡಲಿದ್ದಾರೆ.

ತಮ್ಮ ಭೇಟಿಯ ಸಮಯದಲ್ಲಿ, ಜೈಶಂಕರ್ ಪೂರ್ವ ಆಫ್ರಿಕಾ ದೇಶದ ಉನ್ನತ ನೇತೃತ್ವ ವಹಿಸಲಿದ್ದಾರೆ ಮತ್ತು ಭಾರತೀಯ ನೌಕಾ ಪಡೆಯ ತ್ರಿಶೂಲ್ ಹಡಗಿನ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಲದ್ದಾರೆ. ಈ ವೇಳೆ, ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.