Saturday, 14th December 2024

ಎಸ್‌ಕೆಎಫ್ ಇಂಡಿಯಾದಿಂದ ಆಟೊಮೊಟಿವ್ ಆಫ್ಟರ್‌ಮಾರ್ಕೆಟ್ ಉತ್ಪನ್ನಗಳ ಬಿಡುಗಡೆ

ಪುಣೆ: ಸುಧಾರಿತ ಬಾಳಿಕೆ ಮತ್ತು ಕಾರ್ಯಕ್ಷಮತೆಯ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಎಸ್‌ಕೆಎಫ್ ಇಂಡಿಯಾದ ಆಟೊ ಮೇಟಿವ್ ಮಾರ್ಕೆಟ್ ಡಿ”ಷನ್ ಇಂದು ಮೂರು ಹೊಸ ಉತ್ಪನ್ನಗಳ ಬಿಡುಗಡೆಯನ್ನು ಪ್ರಕಟಿಸಿದೆ.

ಭಾರತದಲ್ಲಿ ವಿವಿಧ ವಲಯಗಳಲ್ಲಿ ಬದಲಾಗುತ್ತಿರುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಸೃಷ್ಟಿಸಲಾದ ಈ ಹೊಸ ಉತ್ಪನ್ನಗಳಲ್ಲಿ ದ್ವಿಚಕ್ರ ವಾಹನಗಳಿಗೆ ಚೈನ್ ಅಂಡ್ ಸ್ಪ್ರಾಕೆಟ್ಸ್‌, ಟೈ”ುಂಗ್ ಬೆಲ್ಟ್ಸ್ ಮತ್ತು 4-ಚಕ್ರ ವಾಹನಗಳಿಗೆ ಸ್ಟೀರಿಂಗ್ ಮತ್ತು ಸಸ್ಪೆನ್ಷನ್ ಸಿಸ್ಟಮ್ಸ್‌ ಒಳಗೊಂಡಿವೆ. ಈ ಶ್ರೇಣಿಯ ಹೊಸ ಆವಿಷ್ಕಾರಕ ಉತ್ಪನ್ನಗಳು ಹೆಚ್ಚಿನ ಗುಣಮಟ್ಟ, ಉನ್ನತ ಶಕ್ತಿ ಮತ್ತು ದೀರ್ಘಬಾಳಿಕೆ ನೀಡುವಂತಹವಾಗಿವೆ.

ಈ ಹೊಸ ಕೊಡುಗೆಗಳ ಕುರಿತು ಎಸ್‌ಕೆಎಫ್ ಇಂಡಿಯಾ ಲಿಮಿಟೆಡ್‌ನ ಡೈರೆಕ್ಟರ್ ಆಟೊಮೊಟಿವ್ ಬ್ಯುಸಿನೆಸ್ ಎಸ್.ವೆಂಕಟ್ ಸುಬ್ರಮಣ್ಯಂ, “ಈ ಹೊಸ ಆಟೊಮೊಟಿವ್ ಆಫ್ಟರ್‌ಮಾರ್ಕೆಟ್ ಉತ್ಪನ್ನಗಳು ಅರ್ಥ ಮಾಡಿಕೊಳ್ಳುವಿಕೆಗೆ ನಮ್ಮ ಬದ್ಧತೆ ಹಾಗೂ ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರ್ಣಗೊಳಿಸುವುದನ್ನು ನಿರೂಪಿಸುತ್ತವೆ.

ಉನ್ನತೀಕರಿಸಿದ ಕಾರ್ಯಕ್ಷಮತೆಯ ಅಗತ್ಯಗಳಿಗೆ ಬೆಂಬಲಿಸಲು ವಿನ್ಯಾಸಗೊಳಿಸಲಾದ ಈ ಹೊಸ ಉತ್ಪನ್ನಗಳು ವಿಶ್ವ ಮಟ್ಟದ ಗುಣಮಟ್ಟದೊಂದಿಗೆ ಬಂದಿವೆ. ಎಸ್‌ಕೆಎಫ್ ಖ್ಯಾತಿ ಪಡೆದ ಮಹತ್ತರ ವಿಶ್ವಾಸಾರ್ಹತೆ ಮತ್ತು ದೀರ್ಘಬಾಳಿಕೆಯೊಂದಿಗೆ ಬಂದಿವೆ ಮತ್ತು ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಿಭಾಗಗಳಲ್ಲಿ ಮಹತ್ತರ ವಿಶ್ವಾಸಾರ್ಹತೆ ಮತ್ತು ದೀರ್ಘಬಾಳಿಕೆ ನೀಡುವ ಗುರಿ ಹೊಂದಿವೆ.

ಗ್ರಾಹಕರ ಸಂತೃಪ್ತಿಯೇ ಅಂತಿಮ ಎಂದು ನಾವು ನಂಬಿದ್ದೇವೆ ಮತ್ತು ಹೊಸ ಉತ್ಪನ್ನ ಲೈನ್ಸ್‌ ಬಿಡುಗಡೆ ಮೂಲಕ ಕಾರ್ಯಕ್ಷಮತೆ ಮತ್ತು ಗ್ರಾಹಕರಿಗೆ ಮೌಲ್ಯದ ನಡುವೆ ಸರಿಯಾದ ಸಮತೋಲನ ನೀಡುವ ನಿಟ್ಟಿನಲ್ಲಿದೆ” ಎಂದರು.