Sunday, 15th December 2024

ಸ್ಲಂ ಕಾಲೋನಿಯಲ್ಲಿ ಭಾರೀ ಬೆಂಕಿ

ಗುವಾಹಟಿ: ಅಸ್ಸಾಂನ ಗುವಾಹಟಿಯ ಸ್ಲಂ ಕಾಲೋನಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.

ಫಟಾಸಿಲ್ ಅಂಬಾರಿ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಹಲವಾರು ಲಕ್ಷ ರೂಪಾಯಿ ಮೌಲ್ಯದ ಹಲವಾರು ಮನೆಗಳು ಮತ್ತು ಆಸ್ತಿಗಳು ನಾಶವಾಗಿವೆ. ವರದಿಗಳ ಪ್ರಕಾರ, ಸ್ಲಂ ಕಾಲೋನಿಯಲ್ಲಿ ಹಲವಾರು ಸಿಲಿಂಡರ್‌ಗಳು ಸ್ಫೋಟ ಗೊಂಡ ನಂತರ ಈ ಘಟನೆ ನಡೆದಿದೆ.

ಸಿಲಿಂಡರ್‌ಗಳ ಸ್ಫೋಟಕ್ಕೆ ನೂರಾರು ಮನೆಗಳು ಕೆಲವೇ ಕ್ಷಣಗಳಲ್ಲಿ ಹೊತ್ತಿ ಉರಿದಿವೆ. ಇದರಿಂದ ತಪ್ಪಿಕೊಳ್ಳಲು ಅಲ್ಲಿನ ಜನರು ಪರದಾಡಿದ್ದಾರೆ ಎನ್ನಲಾಗಿದೆ.