Sunday, 19th May 2024

ನ್ಯೂಡಲ್ಸ್‌ ಪ್ಯಾಕೇಟಿನಲ್ಲಿ ವಜ್ರ, ಚಿನ್ನದ ಕಳ್ಳಸಾಗಣೆ: ನಾಲ್ವರ ಬಂಧನ

ಮುಂಬೈ: ಪ್ರಯಾಣಿಕರ ದೇಹದ ಭಾಗದೊಳಗೆ ಹಾಗೂ ನ್ಯೂಡಲ್ಸ್‌ ಪ್ಯಾಕೇಟ್‌ ನಲ್ಲಿ ವಜ್ರ ಮತ್ತು ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದು, ಅಂದಾಜು 6.46 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಗಳನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

4.44 ಕೋಟಿ ರೂಪಾಯಿ ಮೌಲ್ಯದ 6.8 ಕೆಜಿಗೂ ಅಧಿಕ ಚಿನ್ನ ಹಾಗೂ 2.02 ಕೋಟಿ ರೂಪಾಯಿ ಮೌಲ್ಯದ ವಜ್ರಗಳನ್ನು ವಶಪಡಿಸಿಕೊಂಡು, ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಬ್ಯಾಂಕಾಕ್‌ ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕನ ತಪಾಸಣೆ ನಡೆಸಿದಾಗ, ಟ್ರಾಲಿಯಲ್ಲಿದ್ದ ಬ್ಯಾಗ್‌ ನೊಳಗೆ ನ್ಯೂಡಲ್ಸ್‌ ಪಾಕೇಟ್‌ ಗಳಲ್ಲಿ ವಜ್ರಗಳನ್ನು ಅಡಗಿಸಿ ಇಟ್ಟಿರುವುದು ಪತ್ತೆಯಾಗಿದೆ.

ಘಟನೆಯ ನಂತರ ಆರೋಪಿಗಳನ್ನು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೊಲಂಬೋದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವಿದೇಶಿ ಪ್ರಜೆಯೊಬ್ಬನ ಬಳಿ 359 ಗ್ರಾಂ ತೂಕದ ಚಿನ್ನದ ಬಿಸ್ಕತ್‌ ಗಳನ್ನು ಜಪ್ತಿ ಮಾಡಲಾಗಿದೆ .

10 ಮಂದಿ ಭಾರತೀಯ ಪ್ರಜೆಗಳಿದ್ದು, ಅವರಲ್ಲಿ ಇಬ್ಬರು ದುಬೈನ ಮತ್ತು ಅಬುಧಾಬಿಯಿಂದ, ಹಾಗೂ ಬಹ್ರೈನ್‌, ದೋಹಾ, ರಿಯಾದ್‌, ಮಸ್ಕತ್‌, ಬ್ಯಾಂಕಾಂಕ್‌, ಸಿಂಗಾಪುರ್‌ ನಿಂದ ಪ್ರಯಾಣಿಸುತ್ತಿದ್ದು, ಇವರನ್ನು ತಪಾಸಣೆಗೊಳಪಡಿಸಿದಾಗ 6.199 ಕೆಜಿ ಚಿನ್ನ ಪತ್ತೆಯಾಗಿತ್ತು.

Leave a Reply

Your email address will not be published. Required fields are marked *

error: Content is protected !!