ಡೆಹ್ರಾಡೂನ್: ಭಾರೀ ಹಿಮಕುಸಿತದಿಂದ ಉತ್ತರಾಖಂಡದ ಜನತೆ ತತ್ತರಿಸಿದ್ದು, ಚಮೋಲಿ ಜಿಲ್ಲೆಯ ರೈಣಿ ಗ್ರಾಮದಲ್ಲಿ ಹಿಮಪಾತದಿಂದಾಗಿ ದೌಲಿಗಂಗಾ ನದಿಯಲ್ಲಿ ಭೀಕರ ಪ್ರವಾಹ ಉಂಟಾಗಿದೆ.
ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದ್ದು, ತಪೋವನ ಪ್ರದೇಶದಲ್ಲಿ ದೌಲಿಗಂಗಾ ನದಿ ಉಕ್ಕಿ ಹರಿದಿದೆ. ಹಿಮ ಕುಸಿತದಿಂದ ತತ್ತರಿಸಿದ್ದ ಹಲವು ಮನೆಗಳು ನದಿ ಪ್ರವಾಹದ ಅಬ್ಬರಕ್ಕೆ ಕೊಚ್ಚಿ ಹೋಗಿವೆ.
ಭಾರೀ ಹಿಮಪಾತದಿಂದಾಗಿ ಋಷಿಗಂಗಾ ಯೋಜನೆಯ ಪವರ್ ಪ್ರಾಜೆಕ್ಟ್ ಗೂ ಹಾನಿಯಾಗಿದೆ. ಒಂದೆಡೆ ಪ್ರವಾಹದ ಸೆಳೆತ, ಇನ್ನೊಂದೆಡೆ ಹಿಮ ಕುಸಿತದ ಅಬ್ಬರಕ್ಕೆ ಸಿಲುಕಿರುವ ಹಲವು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.