ಇನ್ನೇನು ಕೆಲವೇ ತಿಂಗಳಲ್ಲಿ ಈ ವರ್ಷದ ಕೊನೆಯ ತಿಂಗಳಿಗೆ ಪದಾರ್ಪಣೆ ಮಾಡಲಿದ್ದೇವೆ. ಈ ಸಂದರ್ಭದಲ್ಲಿ ಮುಂದಿನ ವರ್ಷದ ಕುರಿತು ಸಾಕಷ್ಟು ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಸೂರ್ಯ, ಚಂದ್ರ ಗ್ರಹಣ (Solar and Lunar eclipse) ಯಾವಾಗ ಸಂಭವಿಸುತ್ತದೆ, ಎಲ್ಲಿ ಗೋಚರಿಸುತ್ತದೆ ಎಂಬುದು ಕೂಡ ಸೇರಿದೆ.
ಮತ್ತೊಮ್ಮೆ ಸಂಪೂರ್ಣ ಜಗತ್ತು ಗ್ರಹಣ ಪ್ರಕ್ರಿಯೆಗೆ ಸಾಕ್ಷಿಯಾಗಲಿದೆ. ಧಾರ್ಮಿಕ ದೃಷ್ಟಿಕೋನದಿಂದಲೂ ಗ್ರಹಣವನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಗ್ರಹಣವು ಖಗೋಳದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ. 2024ರಂತೆಯೇ 2025ರಲ್ಲಿಯೂ ಎರಡು ಸೂರ್ಯ ಗ್ರಹಣ ಹಾಗೂ ಎರಡು ಚಂದ್ರ ಗ್ರಹಣಗಳು ಸಂಭವಿಸಲಿವೆ. ಇದರ ಜತೆಗೆ ಮುಂದಿನ ವರ್ಷ ಅಪರೂಪವೆಂದರೆ ಹೋಳಿ ಹುಣ್ಣಿಮೆಯ ದಿನ ಗ್ರಹಣ ಸಂಭವಿಸಲಿದೆ.
ಎರಡು ಸೌರ ಮತ್ತು ಎರಡು ಚಂದ್ರ ಗ್ರಹಣ
2025ರ ವಿಶೇಷವೆಂದರೆ ಮೊದಲ ಚಂದ್ರ ಗ್ರಹಣ ಹೋಳಿಕಾ ದಹನದ ದಿನ ಸಂಭವಿಸಲಿದೆ. ಇದರ ಅನಂತರ ಎರಡನೇ ಚಂದ್ರಗ್ರಹಣವು ಸೆಪ್ಟೆಂಬರ್ 7ರಂದು ಪಿತೃಪಕ್ಷದಲ್ಲಿ ಗ್ರಹಣ ಸಂಭವಿಸಲಿದೆ. ಈ ಎರಡು ಗ್ರಹಣಗಳ ಪರಿಣಾಮ ಭಾರತದ ಮೇಲೆ ಬೀರುವುದಿಲ್ಲ. 2025ರಲ್ಲಿ ಮೊದಲ ಸೂರ್ಯಗ್ರಹಣ ಮಾರ್ಚ್ 29ರಂದು ಮತ್ತು ಎರಡನೆಯದು ಸೆಪ್ಟೆಂಬರ್ 21ರಂದು ಸಂಭವಿಸುತ್ತದೆ. ಇವೆರಡೂ ಭಾಗಶಃ ಸೂರ್ಯಗ್ರಹಣವಾಗಿರುವುದರಿಂದ ಭಾರತದಲ್ಲಿ ಇವೆರಡೂ ಗೋಚರಿಸುವುದಿಲ್ಲ.
ಸೂರ್ಯಗ್ರಹಣ ಹೇಗೆ ಸಂಭವಿಸುತ್ತದೆ?
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದು ಹೋದಾಗ ಮತ್ತು ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಸಾಧ್ಯವಾಗದೇ ಇದ್ದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರ, ಭೂಮಿ ಮತ್ತು ಸೂರ್ಯನನ್ನು ಸರಳ ರೇಖೆಯಲ್ಲಿ ಜೋಡಿಸದಿದ್ದಾಗ ಭಾಗಶಃ ಸೂರ್ಯಗ್ರಹಣ ಉಂಟಾಗುತ್ತದೆ. ಈ ಕಾರಣದಿಂದಾಗಿ ಚಂದ್ರನು ಸೂರ್ಯನ ಕೆಲವು ಭಾಗವನ್ನು ಮಾತ್ರ ಆವರಿಸುತ್ತಾನೆ. ಅದೇ ಸೂರ್ಯಗ್ರಹಣದಲ್ಲಿ ಸ್ಥಳದ ಕಾರಣದಿಂದಾಗಿ ಭಾಗಶಃ ಸೂರ್ಯಗ್ರಹಣವು ಗೋಚರಿಸುತ್ತದೆ.
ಚಂದ್ರನು ಭೂಮಿಯಿಂದ ದೂರದಲ್ಲಿರುವಾಗ ವಾರ್ಷಿಕ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ. ಈ ಕಾರಣದಿಂದಾಗಿ ನಾವು ಸೂರ್ಯಗ್ರಹಣದ ಸಮಯದಲ್ಲಿ ಆಕಾಶದಲ್ಲಿ ‘ಬೆಂಕಿಯ ಉಂಗುರ’ವನ್ನು ಕಾಣುತ್ತೇವೆ. ವಾರ್ಷಿಕ ಸಂಪೂರ್ಣ ಗ್ರಹಣದಲ್ಲಿ ಸಂಪೂರ್ಣವಾಗಿ ಸೂರ್ಯನನ್ನು ಆವರಿಸುತ್ತದೆ. ಆದರೆ ಕೆಲವು ಭಾಗವು ತೆರೆದಿರುತ್ತದೆ.
ಸೂರ್ಯಗ್ರಹಣ ಯಾವಾಗ?
2025ರ ಮಾರ್ಚ್ 29ರಂದು ಭಾಗಶಃ ಸೂರ್ಯಗ್ರಹಣ ಉಂಟಾಗುತ್ತದೆ. ಇದು ಯುರೋಪ್, ಏಷ್ಯಾದ ಭಾಗಗಳು, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಟ್ಲಾಂಟಿಕ್ ಸಾಗರ ಮತ್ತು ಆರ್ಕ್ಟಿಕ್ ಸಾಗರದಲ್ಲಿ ಗೋಚರಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಇದರ ಪರಿಣಾಮ ಭಾರತದಲ್ಲಿ ಬೀರುವುದಿಲ್ಲ.
ಇನ್ನೊಂದು ಸೂರ್ಯಗ್ರಹಣವು ಸೆಪ್ಟೆಂಬರ್ 21ರಂದು ಕಾಣಿಸಲಿದೆ. ಇದು ಆಸ್ಟ್ರೇಲಿಯಾ, ಅಂಟಾರ್ಟಿಕಾ, ಪೆಸಿಫಿಕ್ ಮಹಾಸಾಗರ ಮತ್ತು ಅಟ್ಲಾಂಟಿಕ್ ಸಾಗರದಲ್ಲಿ ಗೋಚರಿಸುತ್ತದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಇದು ಕೂಡ ಭಾರತದಲ್ಲಿ ಕಾಣಿಸುವುದಿಲ್ಲ. ರಾತ್ರಿ 11 ಗಂಟೆಗೆ ಗ್ರಹಣ ಆರಂಭವಾಗಲಿದ್ದು, ಮುಂಜಾನೆ 4 ಗಂಟೆಯವರೆಗೆ ಇರಲಿದೆ.
ಚಂದ್ರ ಗ್ರಹಣ ಯಾವಾಗ?
2025ರ ಮಾರ್ಚ್ 14ರಂದು ಮುಂದಿನ ಸಂಪೂರ್ಣ ಚಂದ್ರಗ್ರಹಣ ಅಥವಾ ರಕ್ತ ಚಂದ್ರ ಗೋಚರಿಸಲಿದೆ. ಇದು ಅಮೆರಿಕ, ಕೆನಡಾ ಮತ್ತು ದಕ್ಷಿಣ ಅಮೆರಿಕ ಖಂಡದಲ್ಲಿ ಮಾತ್ರ ಕಾಣಿಸಲಿದೆ. ಉತ್ತರ ಆಫ್ರಿಕಾದ ಪಶ್ಚಿಮ ಕರಾವಳಿಯಲ್ಲಿ ಮುಂಜಾನೆ ಇದನ್ನು ಕಾಣಬಹುದು.
Karnataka Weather: ರಾಜ್ಯದಲ್ಲಿ ಹೆಚ್ಚಿದ ಚಳಿ, ಬೀದರ್‌ನಲ್ಲಿ ಕನಿಷ್ಠ ಉಷ್ಣಾಂಶ ದಾಖಲು!
ಸೆಪ್ಟೆಂಬರ್ 7ರಂದು ಎರಡನೇ ಚಂದ್ರಗ್ರಹಣವು ಸಂಭವಿಸುತ್ತದೆ.ಈ ಚಂದ್ರಗ್ರಹಣವೂ ಭಾರತದ ಮೇಲೆ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಇದು ಉತ್ತರ ಅಮೆರಿಕ, ಆಸ್ಟ್ರೇಲಿಯಾ, ಮತ್ತು ಇಂಡೋನೇಷ್ಯಾದ ಕೆಲವು ಭಾಗಗಳಲ್ಲಿ ಮಾತ್ರ ಕಾಣಿಸಲಿದೆ.