Saturday, 14th December 2024

ಟ್ರಕ್- ಪಿಕಪ್ ವ್ಯಾನ್ ಡಿಕ್ಕಿ: ಯೋಧ ಸೇರಿ ಮೂವರ ದುರ್ಮರಣ

ಬಿಹಾರ: ಓರ್ವ ಯೋಧ ಸೇರಿ ಮೂರು ಮಂದಿ ಟ್ರಕ್ ಹಾಗೂ ಪಿಕಪ್ ವ್ಯಾನ್ ನಡುವೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬಿಹಾರಿನ ಕತಿಹಾರ್ ಜಿಲ್ಲೆಯಲ್ಲಿ ಭಾನುವಾರ ಘಟನೆ ಸಂಭವಿಸಿದೆ.

ಕತಿಹಾರ್ ಜಿಲ್ಲೆಯ ಪೊತೈ ಔಟ್‍ಪೋಸ್ಟ್ ಏರಿಯಾ ಸಮೀಪ ರಾಷ್ಟ್ರೀಯ ಹೆದ್ದಾರಿ 31ರ ಬಳಿ ನಿಲ್ಲಿಸಲಾಗಿದ್ದ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ವ್ಯಾನ್ ಡ್ರೈವರ್ ಅಬ್ದುಲ್ ಹಮೀದ್ (ವ.50) ಹಾಗೂ ರಾಕೇಶ್ ಪಂಡಿತ್ (ವ.22) ಸ್ಥಳದಲ್ಲಿಯೇ ಹಾಗೂ ಗಂಭೀರವಾಗಿ ಗಾಯಗೊಂಡಿದ್ದ ಯೋಧ ಆದರ್ಶ್ ಕುಮಾರ್(28) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿ ದ್ದಾರೆ.

ಪಂಡಿತ್ ಹಾಗೂ ಆದರ್ಶ್ ಬೆಗುಸರೈ ಹಾಗೂ ಹಮೀದ್ ಹಮೀರ್ಪುರ ನಿವಾಸಿ ಎಂದು ತಿಳಿದು ಬಂದಿದೆ. ಮೃತ ಯೋಧ ಆದರ್ಶ ಪಶ್ಚಿಮ ಬಂಗಾಳದ ಜಲ್ಪೈಗುರಿ ಎಂಬಲ್ಲಿ ಕಾರ್ಯನಿರ್ವಹಿಸುತ್ತಿದ್ದ.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily