Friday, 22nd November 2024

ಸೇನೆಯ ಗೌಪ್ಯ ಮಾಹಿತಿ ಹಂಚಿಕೆ: ಯೋಧನ ಬಂಧನ

ನವದೆಹಲಿ: ಪಾಕಿಸ್ತಾನದ ಮಹಿಳಾ ಏಜೆಂಟ್​ ಜೊತೆ ಹನಿಟ್ರ್ಯಾಪ್​​ನಲ್ಲಿ ಸಿಲುಕಿ ಭಾರತೀಯ ಸೇನೆಯ ಗೌಪ್ಯ ಮಾಹಿತಿ ಮತ್ತು ಕಾರ್ಯತಂತ್ರದ ಮಾಹಿತಿ ಹಂಚಿ ಕೊಂಡಿದ್ದಕ್ಕಾಗಿ ಯೋಧನೋರ್ವನ ಬಂಧಿಸಲಾಗಿದೆ.

ಭಾರತೀಯ ಯೋಧ ಪ್ರದೀಪ್ ಕುಮಾರ್​ ಪಾಕಿಸ್ತಾನ ಗುಪ್ತಚರ ಇಲಾಖೆಯ ಮಹಿಳಾ ಏಜೆಂಟ್​ ಜೊತೆ ಸಂಪರ್ಕದಲ್ಲಿದ್ದರು.

ಮಹಿಳಾ ಏಜೆಂಟ್ ಜೊತೆ ಫೇಸ್​​ಬುಕ್​ ಮತ್ತು ವಾಟ್ಸಾಪ್ ಮೂಲಕ ಸಂಪರ್ಕ ಸಾಧಿಸಿರುವ ಯೋಧ, ಗೌಪ್ಯ ಮಾಹಿತಿ ಹಂಚಿ ಕೊಂಡಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಯೋಧನ ಮೊಬೈಲ್​​ಗೆ ಕರೆ ಮಾಡಿರುವ ಮಹಿಳೆ ತಾನು ಬೆಂಗಳೂರಿನ ಮಿಲಿಟರಿ ನರ್ಸಿಂಗ್​ ಸೇವಾ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದಾಳೆ.

ಜೊತೆಗೆ ದೆಹಲಿಯಲ್ಲಿ ತನ್ನನ್ನು ಭೇಟಿಯಾಗುವಂತೆ ಹಾಗೂ ಮದುವೆ ಮಾಡಿಕೊಳ್ಳುವಂತೆ ಪ್ರಸ್ತಾಪ ಇಟ್ಟಿದ್ದಳು.