Friday, 15th November 2024

Sonam Wangchuk: ಅರೆಸ್ಟ್‌ ಆಗಿರುವ ಸೋನಂ ವಾಂಗ್‌ಚುಕ್‌ ಭೇಟಿಗೆ ಪೊಲೀಸರಿಂದ ಅಡ್ಡಿ; ದೆಹಲಿ ಸಿಎಂ ಆತಿಶಿ ಗರಂ

sonam Wangchuk

ನವದೆಹಲಿ: ಶಿಂಘು ಗಡಿಯಲ್ಲಿಸೋಮವಾರ ರಾತ್ರಿ ನೂರಾರು ಬೆಂಬಲಿಗರೊಂದಿಗೆ ದೆಹಲಿಯೊಳಗೆ ಪ್ರವೇಶಿಸಲು ಯತ್ನಿಸಿ ಬಂಧನಕ್ಕೊಳಗಾಗಿರುವ ಸಾಮಾಜಿಕ ಕಾರ್ಯಕರ್ತೆ ಸೋನಂ ವಾಂಗ್‌ಚುಕ್‌(Sonam Wangchuk) ಅವರ ಭೇಟಿಗೆ ದೆಹಲಿ ಮುಖ್ಯಮಂತ್ರಿ ಆತಿಶಿ(Atishi) ಅವರಿಗೆ ಅವಕಾಶ ಸಿಕ್ಕಿಲ್ಲ. ಇಂದು ವಾಂಗ್‌ಚುಕ್‌ ಅವರ ಭೇಟಿಗೆಂದು ಭವನಾ ಪೊಲೀಸ್‌ ಠಾಣೆಗೆ ತೆರಳಿದ್ದ ಆತಿಶಿ ಅವರನ್ನು ಪೊಲೀಸರು ತಡೆದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ನಾನು ಸೋನಮ್ ವಾಂಗ್‌ಚುಕ್‌ ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಅವರು ಪರಿಸರವಾದಿ ಮತ್ತು ಶಿಕ್ಷಣತಜ್ಞ. ಎಲ್ಲರಿಗೂ ಅವರ ಬಗ್ಗೆ ತಿಳಿದಿದೆ. 150 ಜನರೊಂದಿಗೆ ಲಡಾಖ್‌ನಿಂದ ದೆಹಲಿಗೆ ಬರುತ್ತಿದ್ದರು. ಆದರೆ, ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರ ಅವರನ್ನು ದೆಹಲಿ ಗಡಿಯಲ್ಲಿ ಬಂಧಿಸಿತು. ಲಡಾಖ್‌ನ ಜನರು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬಯಸುತ್ತಾರೆ. ಅವರಿಗೆ ಲೆಫ್ಟಿನೆಂಟ್‌ ಗವರ್ನರ್‌ ಆಡಳಿತ ಬೇಕಾಗಿಲ್ಲ. ನನಗೆ ಪೊಲೀಸ್ ಠಾಣೆಗೆ ಪ್ರವೇಶಿಸಲು ಅವಕಾಶವಿದ್ದರೂ, ಅವರನ್ನು ಭೇಟಿಯಾಗಲು ನನಗೆ ಅವಕಾಶ ನೀಡಲಿಲ್ಲ ಎಂದು ಅತಿಶಿ ತಿಳಿಸಿದರು.

ಈ ಹಿಂದೆ ಅತಿಶಿಯನ್ನು ಬವಾನಾ ಪೊಲೀಸ್ ಠಾಣೆಯ ಹೊರಗೆ ತಡೆಯಲಾಗಿದೆ. ಅತಿಶಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ಬಂದಿದ್ದರು. ಆದರೆ ಪೊಲೀಸ್ ಅಧಿಕಾರಿಗಳು ಅವರನ್ನು ತಡೆದಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ತಿಳಿಸಿದೆ. ಇನ್ನು ದೆಹಲಿ-ಹರಿಯಾಣ ಗಡಿಯಲ್ಲಿರುವ ಬವಾನಾ ಪೊಲೀಸ್ ಠಾಣೆ ಸುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬಂಧನಕ್ಕೊಳಗಾದ ಸೋನಂ ವಾಂಚುಕ್ ಅವರ ಬೆಂಬಲಿಗರನ್ನು ದೆಹಲಿಯ ಗಡಿಯಲ್ಲಿರುವ ಇತರ ಹಲವು ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ.

ಲಡಾಕ್‌ಗೆ ವಿಶೇಷ ಸ್ಥಾನಮಾನ ಕೋರಿ ಸೋನಮ್ ವಾಂಗ್‌ಚುಕ್ ಸೇರಿದಂತೆ ಲಡಾಖ್‌ನಿಂದ ಸುಮಾರು ನೂರಕ್ಕೂ ಜನರು ದೆಹಲಿಯತ್ತ ಪ್ರತಿಭಟನಾ ರ್ಯಾಲಿ ನಡೆಸಿದ್ದರು. ಅವರು ದೆಹಲಿಯೊಳಗೆ ಪ್ರವೇಶಿಸಲು ಮುಂದಾದಾಗ ಪೊಲೀಸಲು ಅವರನ್ನು ಅರೆಸ್ಟ್‌ ಮಾಡಿದ್ದಾರೆ. ಇನ್ನು ಒಂದು ತಿಂಗಳ ಹಿಂದೆ ಲೇಹ್‌ನಿಂದ ಆರಂಭವಾದ ‘ದೆಹಲಿ ಚಲೋ ಪಾದಯಾತ್ರೆ’ಯನ್ನು ಸೋನಮ್ ವಾಂಗ್‌ಚುಕ್ ಮುನ್ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Atishi Marlena: ಮುಖ್ಯಮಂತ್ರಿ ಕುರ್ಚಿ ಖಾಲಿ ಬಿಟ್ಟ ಆತಿಶಿ; ಭರತನಂತೆ ಆಡಳಿತ ನಡೆಸುವೆ ಎಂದ ಡೆಲ್ಲಿ ಹೊಸ ಸಿಎಂ