Thursday, 12th December 2024

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಗೋವಾಕ್ಕೆ ಶಿಫ್ಟ್‌

SOnia Gandhi and Rahul Gandhi

ಪಣಜಿ: ರಾಜಧಾನಿ ನವದೆಹಲಿಯಲ್ಲಿನ ವಿಪರೀತ ವಾಯುಮಾಲಿನ್ಯ ಸಮಸ್ಯೆಯಿಂದಾಗಿ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಗೋವಾಕ್ಕೆ ಶಿಫ್ಟ್‌ ಆಗಿದ್ದಾರೆ.

ವಾಯುಮಾಲಿನ್ಯ ಕಡಿಮೆ ಇರುವ ಪ್ರದೇಶದಲ್ಲಿ ಸಮಯ ಕಳೆಯುವಂತೆ ಈ ಹಿಂದೆ ವೈದ್ಯರು ನೀಡಿದ್ದ ಸಲಹೆ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಪಣಜಿಗೆ ಆಗಮಿಸಿದ್ದಾರೆ.

ಆಗಸ್ಟ್ ತಿಂಗಳಿನಲ್ಲಿ ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಹೆಚ್ಚಿನ ರೀತಿಯ ವೈದ್ಯಕೀಯ ನಿಗಾವಣೆ ಯಲ್ಲಿದ್ದು, ಅವರ ನಿರಂತರ ಎದೆ ಸೋಂಕಿನ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಗೋವಾಕ್ಕೆ ಬಂದಿದ್ದಾರೆ, ದೆಹಲಿಯಲ್ಲಿನ ಮಾಲಿನ್ಯದ ಕಾರಣ ಅಲ್ಲ ಎಂದು ಮೂಲಗಳು ತಿಳಿಸಿವೆ.

ದೆಹಲಿಯ ವಾಯುಮಾಲಿನ್ಯ ಸೋನಿಯಾಗೆ ಆಸ್ತಮಾ ಮತ್ತು ಎದೆ ಸಮಸ್ಯೆಗೆ ಕಾರಣವಾಗಿದ್ದು, ಅಲ್ಲಿಂದ ಕೆಲಕಾಲ ಬೇರೆಡೆಗೆ ತೆರಳುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಸೋಲಿನಿಂದ ಕಂಗೆಟ್ಟಿದ ಕೆಲ ನಾಯಕರು, ಪಕ್ಷದ ಕಳಪೆ ಸಾಧನೆ ಬಗ್ಗೆ ಸಮಗ್ರ ಪರಾಮರ್ಶೆ ನಡೆಸುವಂತೆ ಒತ್ತಾಯ ಹೇರಿದ್ದರು. ಈ ನಡುವೆಯೇ ಸೋನಿಯಾ ಗಾಂಧಿ ಗೋವಾಕ್ಕೆ ಆಗಮಿಸಿದ್ದಾರೆ.