Sunday, 15th December 2024

ಸೋನಿಯಾ ಗಾಂಧಿ ’ಮಾರ್ಫ್’ ವೀಡಿಯೊ: ಓರ್ವ ಬಂಧನ

ಜೈಪುರ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ‘ಮಾರ್ಫ್ ಮಾಡಿದ ಮತ್ತು ಎಡಿಟ್ ಮಾಡಿದ’ ವೀಡಿಯೊ ವನ್ನು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ರಾಜ ಸ್ಥಾನದ ಪ್ರತಾಪ್‌ಗಢದಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ಬಿಪಿನ್ ಕುಮಾರ್ ಸಿಂಗ್ ಶಾಂಡಿಲ್ಯ ಎಂದು ಗುರುತಿಸಲಾಗಿದ್ದು, ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಮಾ.14 ರವರೆಗೆ ರಿಮಾಂಡ್ ಗೆ ಕಳುಹಿಸಲಾಗಿದೆ ಎಂದು ಪ್ರತಾಪಗಢ ಎಸ್ಪಿ ಅಮಿತ್ ಕುಮಾರ್ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಲತಾ ಶರ್ಮಾ ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ದ್ದಾರೆ.

ಕಾಂಗ್ರೆಸ್ ನಾಯಕನ ಮಾರ್ಫ್ ಮಾಡಲಾದ ವಿಡಿಯೋ ಗಮನಕ್ಕೆ ಬಂದಾಗ, ತಕ್ಷಣ ಟ್ವೀಟ್ ಅನ್ನು ತೆಗೆದು ಹಾಕುವಂತೆ ಆರೋಪಿಗೆ ಟ್ವಿಟರ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆರೋಪಿಯು ಎಚ್ಚರಿಕೆ ನಿರ್ಲಕ್ಷಿಸಿದ ನಂತರ ಅಧಿಕಾರಿಗಳು ಟ್ವೀಟ್ ನಿರ್ಬಂಧಿಸಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.