Friday, 13th December 2024

Sony BBC: ಸೋನಿ ಬಿಬಿಸಿ ಅರ್ಥ್‌ ನಿಂದ ಸರ್ ಡೇವಿಡ್ ಅಟೆನ್‌ಬರೋ ನಿರೂಪಿತ ‘ಮ್ಯಾಮಲ್ಸ್’ ಪ್ರೀಮಿಯರ್

ಅತ್ಯಂತ ಪ್ರಿಯವಾದ ವಾಸ್ತವಿಕ ಮನರಂಜನಾ ಚಾನೆಲ್‌ಗಳಲ್ಲಿ ಒಂದಾದ ಸೋನಿ ಬಿಬಿಸಿ ಅರ್ಥ್, ಮ್ಯಾಮಲ್ಸ್‌ ಪ್ರೀಮಿಯರ್ ಗೆ ಸಿದ್ಧವಾಗಿದೆ. ಇದು ಜೀವಂತ ಲೆಜೆಂಡ್ ಸರ್ ಡೇವಿಡ್ ಅಟೆನ್‌ಬರೋ ನಿರೂಪಿಸಿರುವ ಒಂದು ಅದ್ಭುತ ಸರಣಿಯಾಗಿದ್ದು ಅಕ್ಟೋಬರ್ 21, 2024 ರಂದು ಪ್ರೀಮಿಯರ್ ಇದೆ. ಇದೊಂದು ಆರು ಭಾಗಗಳ ಸರಣಿ. ವೇಗವಾಗಿ ಬದಲಾಗುತ್ತಿರುವ ಗ್ರಹದಲ್ಲಿನ ಸಸ್ತನಿಗಳ ಅಸಾಮಾನ್ಯ ಪಯಣವನ್ನು ನಮಗೆ ದೃಶ್ಯಗಳ ಮೂಲಕ ಕತ್ಟಿಕೊಡುತ್ತದೆ; ಅವುಗಳ ವೈವಿಧ್ಯಮಯ ನಡವಳಿಕೆಗಳು, ರೂಪಾಂತರಗಳು ಮತ್ತು ನಮ್ಮ ಪರಿಸರ ವ್ಯವಸ್ಥೆಗಳಲ್ಲಿನ ಅವುಗಳ ಪ್ರಮುಖ ಪಾತ್ರಗಳ ಮೇಲೆ ಬೆಳಕು ಚೆಲ್ಲುತ್ತದೆ.

ಸರ್ ಡೇವಿಡ್ ಅಟೆನ್‌ಬರೋ ನಿರೂಪಿಸಿದ, ಈ ಮ್ಯಾಮಲ್ಸ್ ಆರು ಭಾಗಗಳ ಸರಣಿಯಾಗಿದ್ದು, ಸಸ್ತನಿಗಳ ಜೀವನದ ಅನೂಹ್ಯ ವೈವಿಧ್ಯತೆಯನ್ನು ಪ್ರದರ್ಶಿಸುವ ರೋಮಾಂಚಕ ಪ್ರಪಂಚಕ್ಕೆ ವೀಕ್ಷಕರನ್ನು ಕರೆದೊಯ್ಯುತ್ತದೆ. ಆಫ್ರಿಕಾದ ಭವ್ಯವಾದ ಆನೆಗಳಿಂದ ಹಿಡಿದು ಹಿಮಾಲಯದ ಗುಪ್ತವಾಗಿರುವ ಸ್ನೋ ಲೆಪರ್ಡ್ ಗಳವರೆಗೆ ಮತ್ತು ಸಮುದ್ರದ ಆಳದಿಂದ ಹಿಮಾವೃತ ಟಂಡ್ರಾವರೆಗೆ, ಈ ಸರಣಿಯು ಅನೇಕ ಜಾತಿಗಳ ಆಕರ್ಷಕ ಬದುಕನ್ನು ಪರಿಚಯಿಸುತ್ತದೆ; ಇಲ್ಲಿ ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಕಥೆಯನ್ನು ಹೊಂದಿದೆ. ಬೆರಗುಗೊಳಿಸುವ ಛಾಯಾಗ್ರಹಣ ವೀಕ್ಷಕರನ್ನು ಸಸ್ತನಿಗಳ ಸಂಕೀರ್ಣ ಸಂಬಂಧಗಳ ಮೂಲಕ ಕರೆದೊಯ್ಯುತ್ತದೆ. ಈ ಜೀವಿಗಳು ನಿರಂತರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಬದುಕುಳಿಯಲು, ಬೇಟೆಯಾಡಲು ಮತ್ತು ತಮ್ಮ ಸಂತತಿಯನ್ನು ಬೆಳೆಸಲು ಬಳಸುವ ಗಮನಾರ್ಹ ತಂತ್ರಗಳನ್ನು ತೋರಿಸುತ್ತದೆ. ಅಟೆನ್‌ಬರೋ ಅವರ ನಿರೂಪಣೆ ಕಥೆಗಳಿಗೆ ಇನ್ನಷ್ಟು ಆಳವನ್ನು ತಂದಿವೆ. ಈ ಅದ್ಭುತ ಜೀವಿಗಳ ಸ್ಥಿತಿಸ್ಥಾಪಕತ್ವ ಮತ್ತು ಜಾಣ್ಮೆಯನ್ನು ಎತ್ತಿ ತೋರಿಸುತ್ತವೆ.

ಅಕ್ಟೋಬರ್ 21, 2024 ರಂದು ಮಧ್ಯಾಹ್ನ 12:00 ಮತ್ತು ರಾತ್ರಿ 09:00 ಕ್ಕೆ ಪ್ರತ್ಯೇಕವಾಗಿ ಸೋನಿ ಬಿಬಿಸಿ ಅರ್ಥ್ ನಲ್ಲಿ ಪ್ರಪ್ರಥಮವಾಗಿ ಪ್ರದರ್ಶನಗೊಳ್ಳುವ ಮ್ಯಾಮಲ್ಸ್ ನಲ್ಲಿ ಪ್ರಾಣಿ ಸಾಮ್ರಾಜ್ಯದ ಗುಪ್ತ ಅದ್ಭುತಗಳನ್ನು ವೀಕ್ಷಿಸಿ; ಅಳಿವು-ಉಳಿವು, ಜಾಣ್ಮೆ ಮತ್ತು ಹೊಂದಾಣಿಕೆಯ ವಿಸ್ಮಯಕಾರಿ ನಿಸರ್ಗದಲ್ಲಿ ಮೈ ಮರೆಯಿರಿ.

ಟಿಪ್ಪಣಿಗಳು

ತುಷಾರ್ ಶಾ, ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (ಎಸ್.ಪಿ.ಎನ್.ಐ) ಬಿಸಿನೆಸ್ ಹೆಡ್, ಹಿಂದಿ ಚಲನಚಿತ್ರಗಳು, ಇಂಗ್ಲಿಷ್, ಬೆಂಗಾಲಿ, ಮರಾಠಿ, ಇನ್ಫೋಟೈನ್‌ಮೆಂಟ್ ಚಾನೆಲ್‌ಗಳು ಮತ್ತು ಮುಖ್ಯ ಮಾರ್ಕೆಟಿಂಗ್ ಅಧಿಕಾರಿ (ಸಿಎಂಒ):

“ಪ್ರಾಣಿಗಳ ಸಾಮ್ರಾಜ್ಯದ ಅಸಾಧಾರಣ ಜಗತ್ತನ್ನು ಅನ್ವೇಷಿಸುವ ಮ್ಯಾಮಲ್ಸ್ ಸರಣಿಯನ್ನು ಸೋನಿ ಬಿಬಿಸಿ ಅರ್ಥ್‌ ಮೂಲಕ ತರಲು ನಾವು ಉತ್ಸುಕರಾಗಿದ್ದೇವೆ. ಈ ಸರಣಿಯು ಸಸ್ತನಿಗಳ ಸ್ಥಿತಿಸ್ಥಾಪಕತ್ವ, ಬುದ್ಧಿವಂತಿಕೆ ಮತ್ತು ಸೌಂದರ್ಯವನ್ನು ಚಿತ್ರಿಸುತ್ತದೆ ಮತ್ತು ವೇಗವಾಗಿ ಬದಲಾಗುತ್ತಿರುವ ಪರಿಸರದಲ್ಲಿ ಅವು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ವೀಕ್ಷಕರಿಗೆ ಅಸಾಧಾರಣ ವಿಷಯಗಳನ್ನು ತಲುಪಿಸುವ ಮತ್ತು ನಮ್ಮ ವೀಕ್ಷಕರಿಗೆ ಅತ್ಯುತ್ತಮವಾದ ಅನುಭವವನ್ನು ನೀಡುವ ನಮ್ಮ ಬದ್ಧತೆ ಯಾವಾಗಲೂ ಗಟ್ಟಿಯಾಗಿಯೇ ಇರುತ್ತದೆ.”

ರೋಜರ್ ವೆಬ್, ಮ್ಯಾಮಲ್ಸ್ ಕಾರ್ಯನಿರ್ವಾಹಕ ನಿರ್ಮಾಪಕ

“ನಾನು 20 ವರ್ಷಗಳ ಹಿಂದೆ ಮೂಲ ಲೈಫ್ ಆಫ್ ಮ್ಯಾಮಲ್ಸ್ ಸರಣಿಯ ದೊಡ್ಡ ಅಭಿಮಾನಿಯಾಗಿದ್ದೆ ಮತ್ತು ಈ ನಡುವೆ ಸಾಕಷ್ಟು ಬದಲಾವಣೆಗಳಾಗಿವೆ. ಇಂದು, ಸಸ್ತನಿಗಳ ಬಗ್ಗೆ ಮತ್ತು ಅವು ನಮಗೆ ಮತ್ತು ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲ ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬುದನ್ನು ಹೇಳುವಂತಹ ಅನಿವಾರ್ಯತೆ ಇದೆ ಎಂದು ನನಗೆ ಅನಿಸಿತು. ಈ ಸಂಚಿಕೆಗಳ ಮೂಲಕ, ನಾವು ಈ ಹೊಂದಿಕೊಳ್ಳುವಿಕೆ ಮತ್ತು ಯಾವುದೇ ಪರಿಸ್ಥಿತಿ ಮತ್ತು ಪರಿಸರ ಸ್ಥಿತಿಯನ್ನು ನಿಭಾಯಿಸುವ ಸಸ್ತನಿಗಳ ಸಾಮರ್ಥ್ಯವನ್ನು ಅನ್ವೇಷಿಸಿದ್ದೇವೆ. ಸಸ್ತನಿಗಳು ಭೂಮಿಯ ಮೇಲಿನ ಅತ್ಯಂತ ತಂಪಾದ ಮತ್ತು ಅತ್ಯಂತ ಬಿಸಿಯಾದ ಸ್ಥಳಗಳಲ್ಲಿಯೂ ವಾಸಿಸುತ್ತವೆ ಮತ್ತು ಅವು ಸಮುದ್ರ ದಲ್ಲಿ ಒಂದು ಮೈಲಿ ಕೆಳಗೂ ಹೋಗಬಹುದು ಎಂಬ ಅಂಶವನ್ನು ಈ ಸರಣಿ ತೋರಿಸುತ್ತದೆ. ಸಸ್ತನಿಗಳಾಗಿ ಅವೆಲ್ಲವೂ ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿದ್ದರೂ ಅವು ಒಂದು ಗುಂಪಾಗಿ ನಂಬಲಾಗದಂತಹ ಅದ್ಭುತ ಕೆಲಸಗಳನ್ನು ಮಾಡುತ್ತವೆ. ಸರ್ ಡೇವಿಡ್ ಅಟೆನ್‌ಬರೋ ಅವರ ನಿರೂಪಣೆ ಅದ್ಭುತವಾಗಿದೆ. ಅವರೊಬ್ಬ ಮಾಸ್ಟರ್ ಸ್ಟೋರಿ ಟೆಲ್ಲರ್; ಇಂದೂ ಸಸ್ತನಿಗಳು ಹೇಗೆ ಯಶಸ್ವಿಯಾಗಿ ಬದುಕುಳಿದಿವೆ, ಬೆಳೆಯುತ್ತಿವೆ ಎಂಬುದನ್ನು ವಿವರಿಸುತ್ತ ಅವರು ನಮ್ಮನ್ನು ಸರಿ ದಾರಿಯಲ್ಲಿ ಒಯ್ಯುತ್ತಾರೆ.”