ಹೇಮಂತ್ ಸೊರೆನ್ ಅವರು ಜಾರ್ಖಂಡ್ ವಿಧಾನಸಭೆಯಲ್ಲಿ ಒಂದು ದಿನದ ವಿಶೇಷ ಅಧಿವೇಶನದಲ್ಲಿ ವಿಶ್ವಾಸ ಮತವನ್ನು ಸಾಬೀತುಪಡಿಸಲಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಛತ್ತೀಸ್‌ಗಢದಿಂದ ವಿಶೇಷ ವಿಮಾನದಲ್ಲಿ ಆಡಳಿತಾರೂಢ ಸಮ್ಮಿಶ್ರ ಸರಕಾರದ ಶಾಸಕರು ನಿನ್ನೆ ರಾಜ್ಯ ರಾಜಧಾನಿ ರಾಂಚಿಗೆ ಹಿಂತಿರುಗಿದ್ದಾರೆ. ಅಲ್ಲಿ ಯಾವುದೇ ಪಕ್ಷಾಂತರ ಪ್ರಯತ್ನ ಗಳನ್ನು ತಡೆಯಲು ಶಾಸಕರನ್ನು ರಾಜ್ಯ ಅತಿಥಿಗೃಹದಲ್ಲಿ ಇರಿಸಲಾಗಿದೆ.
ಗಣಿ ಗುತ್ತಿಗೆ ನೀಡುವ ಮೂಲಕ ಚುನಾವಣಾ ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಹೇಮಂತ್ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸ ಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದೆ.
ಹೊಸ ಚುನಾವಣೆಗೆ ಕರೆ ನೀಡಿರುವ ಬಿಜೆಪಿ ಪಕ್ಷವು ಮುಖ್ಯಮಂತ್ರಿ ಸೊರೆನ್ “ನೈತಿಕ ಆಧಾರದ ಮೇಲೆ” ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.