Monday, 16th September 2024

ತರಬೇತಿ ಪಡೆದು ಬನ್ನಿ…ಸ್ಪೈಸ್‌ಜೆಟ್‌ ಸಂಸ್ಥೆಯ 90 ಪೈಲಟ್‌ಗಳಿಗೆ ನಿರ್ಬಂಧ !

#Spicejet

ನವದೆಹಲಿ: ಸ್ಪೈಸ್‌ಜೆಟ್‌ ವಿಮಾನಯಾನ ಸಂಸ್ಥೆಯ 90 ಪೈಲಟ್‌ಗಳಿಗೆ ಬೋಯಿಂಗ್ ವಿಮಾನ ಚಲಾಯಿಸದಂತೆ ನಾಗರಿಕ ವಿಮಾನ ಯಾನ ನಿರ್ದೇಶಾ ಲಯದ ನಿರ್ಬಂಧ ವಿದಿಸಿದೆ.

ಸಂಸ್ಥೆಯ 90 ಪೈಲಟ್‌ಗಳ ಮೇಲೆ ಮ್ಯಾಕ್ಸ್‌ ವಿಮಾನ ಹಾರಿಸುವುದನ್ನು ನಿರ್ಬಂಧಿಸಿದ್ದೇವೆ. ಈ ಪೈಲಟ್‌ಗಳು ಮ್ಯಾಕ್ಸ್‌ ವಿಮಾನಗಳನ್ನು ಹಾರಿಸಲು ಸೂಕ್ತ ತರಬೇತಿ ಪಡೆಯದೇ ಇರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಕುಮಾರ್ ಹೇಳಿದ್ದಾರೆ.

ಪೈಲಟ್‌ಗಳು ಬೋಯಿಂಗ್‌ ಮ್ಯಾಕ್ಸ್‌ ವಿಭಾಗದಲ್ಲಿ ಸಮರ್ಪಕ ತರಬೇತಿ ಪಡೆದು ಯಶಸ್ವಿಯಾದರೆ ಅವರ ಮೇಲಿನ ನಿರ್ಬಂಧ ತೆರವು ಮಾಡಲಾಗುವುದು ಎಂದುಹೇಳಿದ್ದಾರೆ.

2019ರಿಂದ ಬೋಯಿಂಗ್ ಮ್ಯಾಕ್ಸ್ ವಿಮಾನಗಳ ಹಾರಾಟ ವಿಭಾಗದಲ್ಲಿ ಸಮರ್ಪಕವಾಗಿ ತರಬೇತಿ ಪಡೆದವರಿಗೆ ವಿಮಾನ ಚಲಾಯಿಸಲು ಭಾರತೀಯ ನಾಗರಿಕ ವಿಮಾನಯಾನ ನಿರ್ದೇಶನಾಲಯ ಅವಕಾಶ ಕಲ್ಪಿಸಿದೆ. ಇದೇ ವರ್ಷ ಇಥೋಪಿಯನ್ ಏರ್‌ಲೈನ್ಸ್ 737 ಮ್ಯಾಕ್ಸ್ ವಿಮಾನವು ಅಪಘಾತ ಕ್ಕೀಡಾಗಿ, ನಾಲ್ವರು ಭಾರತೀಯರು ಸೇರಿದಂತೆ 157 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.