ನೊಯ್ಡಾ: ಶಿಕ್ಷಕಿಯರ ಶೌಚಾಲಯದಲ್ಲಿ ಶಾಲಾ ನಿರ್ದೇಶಕನೊಬ್ಬ ಸ್ಪೈ ಕ್ಯಾಮರಾ ಇಟ್ಟು ವಿಕೃತಿ ಮೆರೆದಿರುವ ಘಟನೆ ಉತ್ತರ ಪ್ರದೇಶದ(Uttar Pradesh) ನೊಯ್ಡಾದಲ್ಲಿ(Noida) ನಡೆದಿದೆ. ಶಾಲೆಯೊಂದರ ಶಿಕ್ಷಕರ ವಾಶ್ ರೂಂನ(Washroom) ಬಲ್ಬ್(Bulb) ಸಾಕೆಟ್‌ನಲ್ಲಿ(Socket) ಸ್ಪೈ ಕ್ಯಾಮರಾ(Spy Camera) ಇರಿಸಿದ್ದಕ್ಕಾಗಿ ಶಾಲೆಯ ನಿರ್ದೇಶಕನನ್ನು(The director of a school) ಬಂಧಿಸಲಾಗಿದೆ. ತನ್ನ ಕಂಪ್ಯೂಟರ್ ಮತ್ತು ಮೊಬೈಲ್ ಫೋನ್ ಮೂಲಕ ವಾಶ್ ರೂಂ ಒಳಗೆ ಹೋಗುವ ಶಿಕ್ಷಕಿಯರ ನೇರ ದೃಶ್ಯಗಳನ್ನು(Live Footage) ವೀಕ್ಷಿಸಲು ಈತ ಕಿಡಿಗೇಡಿ ಕೃತ್ಯ ಎಸಗಿದ್ದಾನೆ. ಕ್ಯಾಮರಾವನ್ನು ಪತ್ತೆ ಹಚ್ಚಿರುವ ಶಿಕ್ಷಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
नोएडा, यूपी के प्ले स्कूल में टीचर्स के वॉशरूम में हिडन कैमरा लगाया। ये कैमरा बल्ब होल्डर के अंदर फिट था। स्कूल संचालक नवनीश सहाय गिरफ्तार !! pic.twitter.com/qJ7NiuZjnS
— Sachin Gupta (@SachinGuptaUP) December 18, 2024
ಈ ಘಟನೆಯು ನೋಯ್ಡಾದ ಸೆಕ್ಟರ್ 70 ರ ಪ್ಲೇ ಸ್ಕೂಲ್ ಆದ ಲರ್ನ್ ವಿತ್ ಫನ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಡಿಸೆಂಬರ್ 10 ರಂದು, ಶಾಲಾ ಶಿಕ್ಷಕರೊಬ್ಬರು ವಾಶ್‌ರೂಮ್‌ನ ಬಲ್ಬ್ ಹೋಲ್ಡರ್‌ನಲ್ಲಿ ಕ್ಯಾಮರಾವನ್ನು ನೋಡಿದ್ದಾರೆ. ಹೋಲ್ಡರ್‌ನಲ್ಲಿ ಸಣ್ಣ ಬೆಳಕು ಕಾಣಿಸಿದ್ದು, ಅದು ಅವರಲ್ಲಿ ಅನುಮಾನ ಹುಟ್ಟುಹಾಕಿದೆ. ಸೂಕ್ಷ್ಮವಾಗಿ ಗಮನಿಸಿದಾಗ, ಅವರು ಸೀಕ್ರೇಟ್ ಕ್ಯಾಮರಾವನ್ನು ಕಂಡುಹಿಡಿದಿದ್ದಾರೆ. ಶಿಕ್ಷಕಿ ಕೂಡಲೇ ಶಾಲೆಯ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ವಾಶ್ ರೂಮ್‌ನಲ್ಲಿ ಕ್ಯಾಮರಾ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಶಿಕ್ಷಕಿಯು ಶಾಲೆಯ ನಿರ್ದೇಶಕ ನವನಿಷ್ ಸಹಾಯ್ ಮತ್ತು ಸಂಯೋಜಕರಾದ ಪಾರುಲ್ ಅವರಿಗೆ ವಿಷಯ ತಿಳಿಸಿದ್ದಾರೆ. ಆದರೆ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಸಹಾಯ್ ಮತ್ತು ಪಾರುಲ್ ಸಮಸ್ಯೆ ಬಗೆಹರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕಿ ಆರೋಪಿಸಿದ್ದಾರೆ.
ಶಿಕ್ಷಕಿಯ ದೂರಿನ ಮೇರೆಗೆ ನೊಯ್ಡಾದ ಕೇಂದ್ರ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಶಕ್ತಿ ಮೋಹನ್ ಅವಸ್ತಿ ಅವರು ತನಿಖೆ ಆರಂಭಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೀಕ್ರೇಟ್ ಕ್ಯಾಮರಾ ವಶಕ್ಕೆ ಪಡೆದು ಅದು ರೆಕಾರ್ಡ್ ಮಾಡದೆಯೇ ಲೈವ್-ಸ್ಟ್ರೀಮಿಂಗ್ ದೃಶ್ಯಗಳನ್ನು ಸೆರೆ ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ ಎಂದು ತನಿಖೆಯಿಂದ ಧೃಡಪಟ್ಟಿದೆ. ನಂತರ ನಿರ್ದೇಶಕ ನವೀಶ್ ಸಹಾಯ್ ನನ್ನು ಅರೆಸ್ಟ್ ಮಾಡಲಾಗಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ಶಾಲೆಯ ನಿರ್ದೇಶಕ ಸಹಾಯ್ ವಿಚಾರಣೆಯ ಸಮಯದಲ್ಲಿ ತಾನು ಆನ್‌ಲೈನ್‌ನಲ್ಲಿ ₹ 22,000 ಕ್ಕೆ ಸ್ಪೈ ಕ್ಯಾಮರಾವನ್ನು ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ . ಅದನ್ನು ನಿರ್ದಿಷ್ಟವಾಗಿ ಬಲ್ಬ್ ಹೋಲ್ಡರ್‌ನೊಳಗೆ ಮರೆಮಾಡಿ ಇರಿಸಲಾಗಿತ್ತು. ಶಿಕ್ಷಕರ ವಾಶ್‌ರೂಮ್‌ನಿಂದ ನೇರವಾಗಿ ತನ್ನ ಕಂಪ್ಯೂಟರ್ ಮತ್ತು ಮೊಬೈಲ್ ಫೋನಿಗೆ ಲೈವ್ ದೃಶ್ಯಗಳನ್ನು ಸ್ಟ್ರೀಮ್ ಮಾಡಲು ಸಹಾಯ್ ಕ್ಯಾಮರಾವನ್ನು ಬಳಸಿದ್ದಾನೆ ಎಂದು ವರದಿಯಾಗಿದೆ.
ಶಿಕ್ಷಕರ ಪ್ರಕಾರ, ನಿರ್ದೇಶಕರೇ ಕ್ಯಾಮರಾ ಅಳವಡಿಸಿದ್ದಾರೆ ಎಂದು ಶಾಲೆಯ ಭದ್ರತಾ ಸಿಬ್ಬಂದಿ ವಿನೋದ್ ಹೇಳಿದ್ದಾರೆ. ಕ್ಯಾಮರಾ ಅಳವಡಿಸುವಲ್ಲಿ ಭದ್ರತಾ ಸಿಬ್ಬಂದಿಗಳು ಪಾತ್ರ ವಹಿಸಿದ್ದಾರೆಯೇ ಎಂದು ತಿಳಿಯಲು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ:Akshay Kumar: 1250ಕ್ಕೂ ಹೆಚ್ಚು ಕೋತಿಗಳಿಗೆ ನಿತ್ಯ ಆಹಾರ-1 ಕೋಟಿ ರೂ. ದೇಣಿಗೆ ನೀಡಿದ ಅಕ್ಷಯ್ ಕುಮಾರ್