Wednesday, 11th December 2024

ರಾಯಭಾರ ಕಚೇರಿಯಲ್ಲಿದ್ದುಕೊಂಡೇ ಗೂಢಚಾರಿಕೆ: ಶಂಕಿತ ವ್ಯಕ್ತಿ ಬಂಧನ

ನವದೆಹಲಿ: ಭಾರತದ ರಾಯಭಾರ ಕಚೇರಿಯಲ್ಲಿದ್ದುಕೊಂಡೇ ಪಾಕ್ ಪರ ಗೂಢಚಾರಿಕೆ ಮಾಡಿದ ಆರೋಪದ ಮೇರೆಗೆ ಉತ್ತರ ಪ್ರದೇಶ STF ಅಧಿಕಾರಿ ಗಳು ಶಂಕಿತ ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.

ರಷ್ಯಾದ ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿದ್ದ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ ಏಜೆಂಟ್​ನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದ್ದು, ಈತ ಭಾರತೀಯನಾಗಿದ್ದರೂ ಪಾಕ್ ಬೇಹುಗಾರಿಕ ಸಂಸ್ಥೆಗೆ ಗೌಪ್ಯ ಮಾಹಿತಿ ಗಳನ್ನು ರವಾನೆ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ. ಬಂಧಿತ ಏಜೆಂಟ್ ನನ್ನು ಸತ್ಯೇಂದ್ರ ಸಿವಾಲ್ ಎಂದು ಗುರುತಿಸ ಲಾಗಿದ್ದು, ಈತ 2021ರಿಂದ ಮಾಸ್ಕೊದಲ್ಲಿನ ಭಾರತದ ರಾಯಭಾರ ಕಚೇರಿಯಲ್ಲಿ ನೇಮಿಸಲಾಗಿತ್ತು.

ಭಯೋತ್ಪಾದನಾ ನಿಗ್ರಹ ದಳವು ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸತ್ಯೇಂದ್ರನ ಬಗ್ಗೆ ತನ್ನ ಮೂಲ ಗಳಿಂದ ಸುಳಿವು ಪಡೆದಿತ್ತು. ಇದೀಗ ಮೀರತ್​ನಲ್ಲಿ ಆತನನ್ನು ಬಂಧಿಸಿದೆ. ಉತ್ತರ ಪ್ರದೇಶದ ಎಟಿಎಸ್ ಸಿವಾಲ್ ನನ್ನು ವಿಚಾರಣೆ ನಡೆಸಿದ್ದು, ಆರಂಭ ದಲ್ಲಿ ಅತೃಪ್ತಿಕರ ಉತ್ತರಗಳನ್ನು ನೀಡಿದ್ದ ಆತನನ್ನು ತೀವ್ರ ವಿಚಾರಗೊಳಪಡಿಸಿದ ಬಳಿಕ ಬೇಹುಗಾರಿಕೆಯನ್ನು ಒಪ್ಪಿಕೊಂಡಿದ್ದಾನೆ.