ಶ್ರೀನಗರ: ಜಮ್ಮುವಿನ ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಪುಟ್ಟ ಹುಡುಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ದಯವಿಟ್ಟು ಮೋದಿ-ಜಿ, ಏಕ್ ಅಚ್ಛಾ ಸಾ ಸ್ಕೂಲ್ ಬನ್ವಾ ದೋ ನಾ ಎಂದು ಶುಭಾಶಯ ಕೋರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೊ ಸಾಕಷ್ಟು ಗಮನ ಸೆಳೆದಿದೆ.
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಪುಟ್ಟ ಬಾಲಕಿಯೊಬ್ಬಳು ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ತನ್ನ ಶಾಲೆಯ ಬಗ್ಗೆ ಏನಾದರೂ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿಯನ್ನು ಗಂಭೀರವಾಗಿ ತೆಗೆದುಕೊಂಡಿದೆ.
ಜಮ್ಮುವಿನ ಶಾಲಾ ಶಿಕ್ಷಣ ನಿರ್ದೇಶಕ ರವಿಶಂಕರ್ ಶರ್ಮಾ ಅವರು ದೂರದ ಲೋಹೈ-ಮಲ್ಹಾರ್ ಬ್ಲಾಕ್ನಲ್ಲಿರುವ ಸರ್ಕಾರಿ ಶಾಲೆಗೆ ಭೇಟಿ, ಬಹುಬೇಗನೇ ಕಾರ್ಯಪ್ರವೃತರಾಗಿದ್ದಾರೆ.
‘ಶಾಲೆಯನ್ನು ಆಧುನಿಕ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲು 91 ಲಕ್ಷ ರೂ.ಗಳ ಯೋಜನೆಯನ್ನು ಮಂಜೂರು ಮಾಡಲಾಗಿದೆ.
ಜಮ್ಮು ಪ್ರಾಂತ್ಯದ ಎಲ್ಲಾ ಜಿಲ್ಲೆಗಳಲ್ಲಿ 1,000 ಹೊಸ ಶಿಶುವಿಹಾರಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ. ಮುಂದಿನ ಮೂರರಿಂದ ನಾಲ್ಕು ವರ್ಷ ಗಳಲ್ಲಿ, ಪ್ರತಿ 10 ಜಿಲ್ಲೆಗಳಲ್ಲಿ (ಜಮ್ಮು ಪ್ರಾಂತ್ಯದಲ್ಲಿ) 250 ಶಿಶುವಿಹಾರಗಳ ನಿರ್ಮಾಣವನ್ನು ಖಚಿತಪಡಿಸಿ ಕೊಳ್ಳಲು ನಮಗೆ ಸಾಧ್ಯವಾಗುತ್ತದೆ’ ‘ ಎಂದು ರವಿಶಂಕರ್ ಶರ್ಮಾ ತಿಳಿಸಿದ್ದಾರೆ.