Friday, 22nd November 2024

ಸುಶಾಂತ್ ಸಾವಿನ ಪ್ರಕರಣ: ಚಾರ್ಜ್‌ಶೀಟ್‌’ನಲ್ಲಿ ರಿಯಾ ಹೆಸರು ಪ್ರಸ್ತಾಪ?

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿ, ಡ್ರಗ್ಸ್‌ ಪ್ರಕರಣದಲ್ಲಿ ಮಾದಕವಸ್ತು ನಿಯಂತ್ರಣ ಸಂಸ್ಥೆ(ಎನ್‌ಸಿಬಿ) ಶುಕ್ರವಾರ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಎನ್‌ಸಿಬಿ ಸಲ್ಲಿಸಿರುವ 12,000 ಪುಟಗಳ ಚಾರ್ಜ್‌ಶೀಟ್‌ನಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ತಮ್ಮ ಶೌವಿಕ್‌ ಸೇರಿದಂತೆ 33 ಆರೋಪಿಗಳ ಹೆಸರು ಪ್ರಸ್ತಾಪಿಸಲಾಗಿದೆ. ಅಲ್ಲದೆ 200ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳು ಕೂಡ ಚಾರ್ಜ್‌ಶೀಟ್‌ನಲ್ಲಿದೆ.

ಈ ಪ್ರಕರಣ ಸಂಬಂಧ ಎನ್‌ಸಿಬಿಯು ರಿಯಾ ಚಕ್ರವರ್ತಿ ಮತ್ತು ತಮ್ಮ ಶೌವಿಕ್‌ ಸೇರಿದಂತೆ ಸುಶಾಂತ್‌ನ ಕೆಲ ಸಿಬ್ಬಂದಿಯನ್ನು ಬಂಧಿಸಿತ್ತು. ಸದ್ಯ ರಿಯಾ, ಶೌವಿಕ್‌ ಸೇರಿದಂತೆ ಕೆಲವು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.