Sunday, 22nd September 2024

Star Health Insurance: ಸ್ಟಾರ್ ಇನ್ಶೂರೆನ್ಸ್ ಕಂಪನಿಯ 3.1 ಕೋಟಿ ಗ್ರಾಹಕರ ಮಾಹಿತಿ ಹ್ಯಾಕ್, ನಿಮ್ಮ ಮಾಹಿತಿ ಸೋರಿಕೆಯಾಗಿದೆಯೇ ಚೆಕ್ ಮಾಡಿ

Star Health Insurance

ಭಾರತದ ಅತೀ ದೊಡ್ಡ ಆರೋಗ್ಯ ವಿಮೆ ಕಂಪನಿಗಳಲ್ಲಿ ಒಂದಾದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನ (Star Health Insurance) ಗ್ರಾಹಕರ ಮಾಹಿತಿಯನ್ನು (personal information) ಹ್ಯಾಕ್ (Information hack) ಮಾಡಲಾಗಿದೆ. ಇದರಿಂದ ಸುಮಾರು 3.1 ಕೋಟಿ ಗ್ರಾಹಕರ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಿರುವುದಾಗಿ ಕಂಪನಿ ಒಪ್ಪಿಕೊಂಡಿದೆ.

ಸೂಕ್ಷ್ಮ ವೈದ್ಯಕೀಯ ವರದಿಗಳು ಸೇರಿ ಹ್ಯಾಕ್ ಮಾಡಲಾಗಿರುವ ಎಲ್ಲ ಮಾಹಿತಿಗಳನ್ನು ಟೆಲಿಗ್ರಾಮ್‌ ಅಪ್ಲಿಕೇಷನ್‌ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎನ್ನಲಾಗಿದೆ. ಟೆಲಿಗ್ರಾಮ್‌ ಮೂಲಕ ಸೃಷ್ಟಿಸಲಾದ ಚಾಟ್‌ಬಾಟ್‌ಗಳಲ್ಲಿ ಸ್ಟಾರ್ ಹೆಲ್ತ್‌ನ ಗ್ರಾಹಕರ ವೈಯಕ್ತಿಕ ಡೇಟಾವನ್ನು ಉಚಿತವಾಗಿ ನೀಡಲಾಗುತ್ತಿದೆ. “xenZen” ಹೊಂದಿರುವ ಬಳಕೆದಾರರು ಈ ಚಾಟ್‌ಬಾಟ್‌ ರಚಿಸಿದ್ದಾರೆ ಎನ್ನಲಾಗಿದೆ.

ಇದರಲ್ಲಿ ಜನರಿಗೆ ವಿವಿಧ ಸೂಕ್ಷ್ಮ ದಾಖಲೆಗಳನ್ನು ಪಡೆಯಲು, ಡೌನ್‌ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಇದರಲ್ಲಿ ಪಾಲಿಸಿ ವಿವರಗಳು, ಕ್ಲೈಮ್‌ ಮಾಹಿತಿ ಮತ್ತು ವೈದ್ಯಕೀಯ ರೋಗನಿರ್ಣಯಗಳ ಮಾಹಿತಿಗಳು ಲಭ್ಯವಾಗುತ್ತಿದೆ. 1,500ಕ್ಕೂ ಹೆಚ್ಚು ಫೈಲ್‌ಗಳನ್ನು ಡೌನ್‌ಲೋಡ್ ಅವಕಾಶ ನೀಡುತ್ತಿದ್ದು, ಇದರಲ್ಲಿ ಇತ್ತೀಚಿನ ಕೆಲವು ದಾಖಲೆಗಳು ಸೇರಿಕೊಂಡಿವೆ.

ಯುಕೆ ಮೂಲದ ಭದ್ರತಾ ಸಂಶೋಧಕ ಜೇಸನ್ ಪಾರ್ಕರ್ ಅವರು ಆನ್‌ಲೈನ್ ಹ್ಯಾಕರ್ ಫೋರಮ್‌ನಲ್ಲಿ ಸಂಭಾವ್ಯ ಖರೀದಿದಾರರಾಗಿ ಇದರಲ್ಲಿ ಪಾಲ್ಗೊಂಡಿರುವುದಾಗಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಬಳಕೆದಾರರು “xenZen” ಚಾಟ್‌ಬಾಟ್‌ಗಳನ್ನು ರಚಿಸಿರುವುದನ್ನು ಸಮರ್ಥಿಸಿಕೊಂಡಿದ್ದು, ಬಾಟ್‌ ತೆಗೆದುಹಾಕಿದರೆ ಇನ್ನೊಂದರಲ್ಲಿ ಬಹಿರಂಗ ಪಡಿಸುವುದಾಗಿ ಎಚ್ಚರಿಸಿದೆ. ಇದು ಡೇಟಾವನ್ನು ಹಂಚಿಕೊಳ್ಳುವುದನ್ನು ಮುಂದುವರಿಸುವ ಹ್ಯಾಕರ್‌ನ ಉದ್ದೇಶ ಬಹಿರಂಗಪಡಿಸಿದೆ. ಈ ಎಚ್ಚರಿಕೆಯ ಬಳಿಕ ಟೆಲಿಗ್ರಾಮ್ ಕೆಲವು ಆರಂಭಿಕ ಚಾಟ್‌ಬಾಟ್‌ಗಳನ್ನು ತೆಗೆದುಹಾಕಿದೆ. ಆದಾಗ್ಯೂ ಹೊಸತು ಕಾಣಿಸಿಕೊಂಡಿದೆ ಎನ್ನಲಾಗಿದೆ.

ಟೆಲಿಗ್ರಾಮ್ ಏನು ಹೇಳಿದೆ?

ಈ ಕುರಿತು ಪ್ರತಿಕ್ರಿಯಿಸಿರುವ ಟೆಲಿಗ್ರಾಮ್ ವಕ್ತಾರ ರೆಮಿ ವಾಘನ್, ಖಾಸಗಿ ಮಾಹಿತಿ ಹಂಚಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂತಹ ವಿಷಯವನ್ನು ಪತ್ತೆಹಚ್ಚಿದ ತಕ್ಷಣ ತೆಗೆದುಹಾಕುತ್ತದೆ ಎಂದು ಹೇಳಿದ್ದಾರೆ. ಪ್ರತಿದಿನ ಲಕ್ಷಾಂತರ ಹಾನಿಕಾರಕ ಪೋಸ್ಟ್‌ಗಳನ್ನು ತೆಗೆದುಹಾಕಲು ಟೆಲಿಗ್ರಾಮ್ ಮಾಡರೇಟರ್‌ಗಳು ಪೂರ್ವಭಾವಿ ಮೇಲ್ವಿಚಾರಣೆ, ಎಐ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

PM Modi Visit US: ಮೋದಿ-ಬೈಡನ್‌ ದ್ವಿಪಕ್ಷೀಯ ಮಾತುಕತೆ; ಯಾವೆಲ್ಲಾ ವಿಚಾರ ಚರ್ಚೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಸ್ಟಾರ್ ಹೆಲ್ತ್ ಹೇಳಿರುವುದೇನು?

ಮಾಹಿತಿ ಸೋರಿಕೆಯನ್ನು ಸ್ಟಾರ್ ಹೆಲ್ತ್ ಒಪ್ಪಿಕೊಂಡಿದೆ. ಇದರ ಪರಿಹಾರಕ್ಕೆ ಕಾನೂನು ಸಂಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದೆ. ಹ್ಯಾಕಿಂಗ್ ಘಟನೆಯ ಹೊರತಾಗಿಯೂ ಗ್ರಾಹಕರ ಸೂಕ್ಷ್ಮ ಮಾಹಿತಿಗಳು ಸುರಕ್ಷಿತವಾಗಿರುಸುವುದಾಗಿ ಕಂಪನಿಯು ಭರವಸೆ ನೀಡಿದೆ.