Thursday, 12th December 2024

ಪೆಟ್ರೋಲ್, ಡೀಸೆಲ್ ಬೆಲೆ ದೇಶಾದ್ಯಂತ ಸ್ಥಿರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತ 15ನೇ ದಿನವೂ ದೇಶಾದ್ಯಂತ ಸ್ಥಿರವಾಗಿವೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 91.17 ರೂ. ಡೀಸೆಲ್ 81. 47 ರೂ. ಮುಂಬೈಯಲ್ಲಿ ಪೆಟ್ರೋಲ್ 97.57 ರೂ.ಗೆ ಚಿಲ್ಲರೆ ಮಾರಾಟವಾಗಿದ್ದರೆ, ಡೀಸೆಲ್ ಬೆಲೆ 88. 60 ರೂ.ಆಗಿದೆ.

ಈ ವರ್ಷದ ಫೆಬ್ರವರಿಯಲ್ಲಿ ಸದಸ್ಯ ರಾಷ್ಟ್ರಗಳು ಪ್ರತಿದಿನ 6.5 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಉತ್ಪಾದನೆ ಕಡಿಮೆ ಮಾಡಿವೆ. ವರದಿಯ ನಂತರ, ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕಚ್ಚಾ ತೈಲ ಧಾರಣೆ ವೇಗ ಪಡೆದುಕೊಂಡಿತು.