Sunday, 8th September 2024

ಆಪರೇಷನ್ ಗಂಗಾ ಕಾರ್ಯಾಚರಣೆ ನಿಂತಿಲ್ಲ: ಅರಿಂದಮ್ ಬಗ್ಚಿ

ನವದೆಹಲಿ: ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ನಡೆಸುತ್ತಿರುವ ಆಪರೇಷನ್ ಗಂಗಾ ಕಾರ್ಯಾ ಚರಣೆ ಮುಂದುವರೆದಿದೆ. ಸುಮಾರು 50 ಭಾರತೀಯರು ಅಲ್ಲಿ ಉಳಿದಿದ್ದು, 15-20 ಜನರು ವಾಪಸ್ ಬರಲು ಬಯಸಿ ದ್ದಾರೆ.

ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ, “15 ರಿಂದ 20 ಭಾರತೀ ಯರು ವಾಪಸ್ ಬರಲು ಬಯಸಿದ್ದಾರೆ. ಯುದ್ಧ ನಡೆಯುತ್ತಿದ್ದರೂ ವಾಪಸ್ ಆಗಲು ಬೇಕಾದ ಸಹಕಾರ ನೀಡುತ್ತೇವೆ ಎಂದು ಹೇಳಿದರು.

ಮಾಹಿತಿ ಅನ್ವಯ ಉಕ್ರೇನ್‌ನಲ್ಲಿ 50 ಭಾರತೀಯರು ಸಿಲುಕಿದ್ದಾರೆ. ವಾಪಸ್ ಬರಲು ಬಯಸಿದವರನ್ನು ಕರೆತರಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

‘ಆಪರೇಷನ್ ಗಂಗಾ’ ಕಾರ್ಯಾಚರಣೆ ಅಡಿ ಪೂರ್ವ ಯುರೋಪ್ ರಾಷ್ಟ್ರಗಳಿಂದ ಇದುವರೆಗೂ 22,500 ಜನರನ್ನು ವಾಪಸ್ ಕರೆ ತರಲಾಗಿದೆ. ಕೆಲವು ಭಾರತೀಯರು ಇನ್ನೂ ಉಕ್ರೇನ್‌ನಲ್ಲಿ ಉಳಿದಿದ್ದು, ಅವರಲ್ಲಿ 15-20 ಜನರು ವಾಪಸ್ ಆಗಲು ಬಯಸಿದ್ದಾರೆ. ಆಪರೇಷನ್ ಗಂಗಾ ಕಾರ್ಯಾಚರಣೆ ಇನ್ನೂ ಜಾರಿಯಲ್ಲಿದ್ದು, ದೇಶಕ್ಕೆ ವಾಪಸ್ ಆಗಲು ಬಯಸುವವರನ್ನು ಕರೆತರಲಾಗುತ್ತದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಹೇಳಿದೆ.

ಆಪರೇಷನ್ ಗಂಗಾ ಕಾರ್ಯಾಚರಣೆ ಇನ್ನೂ ಪೂರ್ಣಗೊಂಡಿಲ್ಲ. ಪೋಲೆಂಡ್‌ನ ವಾರ್ಸಾ ದಿಂದ ವಿಶೇಷ ವಿಮಾನ ಸಂಚಾರ ನಡೆಸಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ಬಳಿಕ ಭಾರತ ಸರ್ಕಾರ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲು ಆಪರೇಷನ್‌ ಗಂಗಾ ಎಂಬ ಕಾರ್ಯಾಚರಣೆ ಆರಂಭಿಸಿತು.

ಪ್ರಧಾನಿ ಮೋದಿ ವಿವಿಧ ರಾಷ್ಟ್ರಗಳಿಗೆ ತಮ್ಮ ವಿಶೇಷ ಪ್ರತಿನಿಧಿಗಳಾಗಿ ನಾಲ್ವರು ಸಚಿವರನ್ನು ಕಳಿಸಿದರು. ಅಲ್ಲದೇ ಅಪರೇಷನ್ ಗಂಗಾ ಕಾರ್ಯಾಚರಣೆಗೆ ಸಹಕಾರ ನೀಡುವಂತೆ ಪ್ರಧಾನಿಗಳು ವಾಯುಪಡೆಗೆ ಸೂಚನೆ ನೀಡಿದರು. ಬಳಿಕ ವಾಯುಪಡೆ ವಿಮಾನ ಗಳನ್ನು ಬಳಕೆ ಮಾಡಲು ಆರಂಭಿಸಲಾಯಿತು. ಉಕ್ರೇನ್ ಗಡಿಗಳಲ್ಲಿ ಮಾನವೀಯ ಪರಿಸ್ಥಿತಿ ಎದುರಿಸಲು ಉಕ್ರೇನ್‌ಗೆ ಪರಿಹಾರ ಪೂರೈಕೆಯನ್ನು ಸಹ ಮಾಡಲಾಯಿತು.

error: Content is protected !!