ಮುಂಬೈ: ಪ್ರವಾದಿ ಮೊಹಮ್ಮದ್ ವಿರುದ್ಧ ಹಿಂದೂ ಧರ್ಮಗುರುವೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿರುವುದನ್ನು ಖಂಡಿಸಿ ಮಹಾರಾಷ್ಟ್ರದ(Stone pelting) ಅಮರಾವತಿಯಲ್ಲಿ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ 21 ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ವಿವಾದಿತ ದಾರ್ಶನಿಕ ಗಾಜಿಯಾಬಾದ್‌ನ ಯತಿ ನರಸಿಂಹಾನಂದ ವಿರುದ್ಧ ತಕ್ಷಣ ದೂರು ದಾಖಲಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Stone pelting at a police station in Maharashtra's Amravati as some locals demanded an FIR against a 'baba'. The incident happened last evening at nearly 8 pm. #Maharashtra pic.twitter.com/V2tX1rHIMp
— Vani Mehrotra (@vani_mehrotra) October 5, 2024
ಅಮರಾವತಿ ನಗರದ ನಾಗಪುರಿ ಗೇಟ್ ಪೊಲೀಸ್ ಠಾಣೆಯ ಹೊರಗೆ ಶುಕ್ರವಾರ ರಾತ್ರಿ ನಡೆದ ಕಲ್ಲು ತೂರಾಟದಲ್ಲಿ ಕನಿಷ್ಠ 10 ಪೊಲೀಸ್ ವ್ಯಾನ್‌ಗಳಿಗೆ ಹಾನಿಯಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂಬಂಧ 1,200 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 26 ಮಂದಿಯನ್ನು ಪೊಲೀಸರು ಗುರುತಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಜಿಯಾಬಾದ್‌ನ ಯತಿ ನರಸಿಂಹಾನಂದ ಮಹಾರಾಜ್ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಕೆಲವು ಮುಸ್ಲಿಂ ಸಂಘಟನೆಗಳ ಸದಸ್ಯರು ರಾತ್ರಿ 8.15 ರ ಸುಮಾರಿಗೆ ನಾಗ್ಪುರಿ ಗೇಟ್ ಪೊಲೀಸ್ ಠಾಣೆಗೆ ಬಂದಿತು. ಈ ವೇಳೆ ಈ ಕಲ್ಲು ತೂರಾಟ ನಡೆದಿದೆ. ಅವರ ಬೇಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಒಂದು ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
“ಆದರೆ ಕೆಲವರು ಹಿಂದೂ ಧರ್ಮೀಯರ ಹೇಳಿಕೆಗಳ ವೀಡಿಯೊವನ್ನು ಪ್ರಸಾರ ಮಾಡುತ್ತಿದ್ದಂತೆ, ದೊಡ್ಡ ಗುಂಪು ನಾಗ್ಪುರಿಗೇಟ್ ಪೊಲೀಸ್ ಠಾಣೆಗೆ ಮರಳಿತು. ಆದರೆ ಪೊಲೀಸ್ ಅಧಿಕಾರಿಗಳು ಗುಂಪಿನ ಮನವೊಲಿಸಲು ಪ್ರಯತ್ನಿಸಿದಾಗ, ಗುಂಪು ಏಕಾಏಕಿ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿತು.” ಶ್ರೀ ರೆಡ್ಡಿ ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸಿ ಗುಂಪನ್ನು ಚದುರಿಸಿದರು. ಹೆಚ್ಚುವರಿ ಪೊಲೀಸ್ ಪಡೆಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದರು. ದಾಳಿಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳು ಗಾಯಗೊಂಡಿದ್ದು, ಪೊಲೀಸರು ಗುಂಪಿನ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಏನಿದು ವಿವಾದ?
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತಿ ನರಸಿಂಹಾನಂದ ಅವರು, ಪ್ರತಿ ದಸರಾಕ್ಕೆ ರಾವಣನನ್ನು ಸುಡುವುದಾದರೆ ಇನ್ನು ಮುಂದೆ ಮೊಹಮ್ಮದ್ ಪೈಗಂಬರರ ಮೂರ್ತಿಯನ್ನು ಸುಟ್ಟು ಹಾಕಿ ಎಂದು ಕರೆ ನೀಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲಾಗುತ್ತಿದ್ದಂತೆ ಮುಸ್ಲಿಂ ಸಮುದಾಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.
One more hateful speech by #YatiNarasinghanandSaraswati targeting #Islam & #ProphetMuhammad.
— Hate Detector 🔍 (@HateDetectors) October 3, 2024
In his recent speech, he says "If you have to burn effigies on every #Dussehra, then burn the effigies of Mohammad". pic.twitter.com/b01Iekzvxk
ಈ ಸುದ್ದಿಯನ್ನೂ ಓದಿ: Bengaluru Woman Murder: ಪ್ರೇಯಸಿಯನ್ನು ಕೊಚ್ಚಿ ಫ್ರಿಜ್‌ನಲ್ಲಿ ತುಂಬಿದ ಪಾತಕಿ ಪಶ್ಚಿಮ ಬಂಗಾಳದಲ್ಲಿ ಕಣ್ಮರೆ