Thursday, 12th December 2024

ಕರ್ನಾಟಕದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ರಿಲೀಫ್: ಪರೀಕ್ಷೆ ಮುಂದೂಡಿಕೆ

ನವದೆಹಲಿ: ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 2021ರ ಪರೀಕ್ಷೆಗಳನ್ನು ಮುಂದೂಡಿರು ವುದಾಗಿ ಘೋಷಿಸಿದೆ.

ಶನಿವಾರ ಹೊರಡಿಸಿದ ಪರಿಷ್ಕೃತ ಸುತ್ತೋಲೆಯಲ್ಲಿ, ಮೊದಲ ವರ್ಷದ ವಿದ್ಯಾರ್ಥಿಗಳ ಪರೀಕ್ಷೆಗಳು ಫೆಬ್ರವರಿ 8ರಿಂದ ಆರಂಭ ವಾಗಲಿದ್ದು, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗಾಗಿ ಮಾರ್ಚ್ 2ರಿಂದ ಪರೀಕ್ಷೆ ಆರಂಭಿಸಲಾಗುತ್ತದೆ ಎಂದು ವಿಶ್ವವಿದ್ಯಾಲಯ ಶನಿವಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ. ಅಂತಿಮ ವರ್ಷದ ಮತ್ತು ಮೂರನೇ ವರ್ಷದ ವಿದ್ಯಾರ್ಥಿಗಳಿಗೆ ಮಾರ್ಚ್ 23ರಿಂದ ಪರೀಕ್ಷೆಗಳು ನಡೆಯಲಿವೆ.

ವೈದ್ಯಕೀಯ ಕಾಲೇಜುಗಳ ಡೀನ್ ಗಳಿಗೆ ಹಾಗೂ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ ನಂತರ ಈ ಪರಿಷ್ಕೃತ ಸುತ್ತೋಲೆ ಹೊರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 18ರಂದು ಸುತ್ತೋಲೆ ಹೊರಡಿಸಿರುವ ಕಾಲೇಜುಗಳು ಡಿಸೆಂಬರ್ 1ರಿಂದ ಆರಂಭವಾಗ ಲಿದ್ದು, ಜನವರಿ 19ರಿಂದ ಪರೀಕ್ಷೆಗಳು ಆರಂಭವಾಗಲಿವೆ.

ಆರ್ ಜಿಯುಎಚ್ ಎಸ್ ಗೆ ಸಂಯೋಜಿತವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆ ಗಳಲ್ಲಿ ಪ್ರತಿಭಟನೆ ನಡೆಸಿ, ಇಷ್ಟು ಕಡಿಮೆ ಅವಧಿಯಲ್ಲಿ ಪರೀಕ್ಷೆ ಬರೆಯುವುದು, ಪ್ರಾಯೋಗಿಕ ತರಗತಿಗಳನ್ನು ಪೂರ್ಣಗೊಳಿ ಸದೆ ಪರೀಕ್ಷೆ ಬರೆಯುವುದರ ಬಗ್ಗೆ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದರು.