Thursday, 12th December 2024

ಎಸ್‌ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಯೋಜನೆ: ಕೇಂದ್ರದ ಅನುಮೋದನೆ

ನವದೆಹಲಿ: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಭಾರತ ಸರ್ಕಾರ ಮತ್ತು ಪತ್ರಿಕಾ ಮಾಹಿತಿ ಬ್ಯೂರೋದ ಪ್ರಧಾನ ಮಹಾನಿರ್ದೇಶಕರು ಕೆ.ಎಸ್.ಧಟ್ವಾಲಿಯಾ ಮಾಹಿತಿ ನೀಡಿ ದರು. ಪ್ರಸಕ್ತ 10ನೇ ತರಗತಿಗಿಂತ ಹೆಚ್ಚಿನ ಶಿಕ್ಷಣ ವನ್ನು ಮುಂದುವರಿಸದ 1.36 ಕೋಟಿ ಬಡ ವಿದ್ಯಾರ್ಥಿಗಳನ್ನು ಮುಂದಿನ 5 ವರ್ಷಗಳಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆಗೆ ತರಲಾಗುತ್ತದೆ ಎಂದು ಹೇಳಿದರು.

ಯೋಜನೆಯಲ್ಲಿ ಕೇಂದ್ರದ ಪಾಲನ್ನು ಡಿಬಿಟಿ ಮಾದರಿಯಲ್ಲಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗು ವುದು. ‘2017-18 ರಿಂದ 2019-20ರ ಅವಧಿಯಲ್ಲಿ ವಾರ್ಷಿಕವಾಗಿ 1100 ಕೋಟಿ ರೂ.ಗಳ ಕೇಂದ್ರ ನೆರವು 5 ಪಟ್ಟು ಹೆಚ್ಚಿಸ ಲಾಗು ವುದು. 2020-21 ರಿಂದ 2025-26ರ ವರೆಗೆ ವಾರ್ಷಿಕವಾಗಿ ₹6000 ಕೋಟಿ ಅನ್ನು ಹೆಚ್ಚಿಸಲಾಗುವುದು’ ಎಂದು ಹೇಳಿದರು.