Saturday, 23rd November 2024

ಪೂರ್ವ ಆಫ್ರಿಕಾ ಕೀಟಗಳ ಹಾವಳಿ: ವಿದ್ಯಾರ್ಥಿ ಕೈಗೆ ಗಾಯ

ಗ್ಯಾಂಗ್ಟಕ್: ಪೂರ್ವ ಆಫ್ರಿಕಾ ಮೂಲದ ಕೀಟಗಳ ದಾಳಿಯಿಂದ ಅಸ್ಸಾಂನ ಇಂಜಿನಿಯರಿಂಗ್‌ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಯೊಬ್ಬನ ಕೈಗೆ ಗಂಭೀರ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾನೆ.

ನೈರೋಬಿ ಫ್ಲೈಸ್‌ ಎಂದು ಗುರುತಿಸಲ್ಪಡುವ ಕೆಂಪಿರುವೆಯಂತೆ ಕಂಡು ಬರುವ, ಚೇಳಿನಂತೆ ಹಿಂಬದಿಯನ್ನು ಎತ್ತಿಕೊಂಡು ಓಡಾಡುವ ಕೀಟಗಳಾಗಿವೆ. ಇದರ ಮೂಲ ಪೂರ್ವ ಆಫ್ರಿಕಾವಾಗಿದ್ದು, ಸಿಕ್ಕಿಂನ ಮಾಝಿತರ್‌ನಲ್ಲಿರುವ ಮಣಿಪಾಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜು ಆವರಣದಲ್ಲಿ ಕ್ಷಿಪ್ರ ಬೆಳವಣಿಗೆ ಹೊಂದುತ್ತಿವೆ.

ಗಾಯಗೊಂಡ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿ ದ್ದಾರೆ. ಕಾಲೇಜು ಆವರಣದಲ್ಲಿ ಕೀಟಗಳ ತೊಂದರೆಯನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾಲೇಜು ಆಡಳಿತ ತಿಳಿಸಿದೆ.

ನೈರೋಬಿ ಫ್ಲೈಸ್‌- ಇವುಗಳು ಸ್ಥಳೀಯ ಕೀಟಗಳಲ್ಲ. ಸಾಕಷ್ಟು ಆಹಾರ ಸಿಗುವ ಜಾಗಗಳನ್ನು, ಸಂತಾನೋತ್ಪತ್ತಿಗೆ ಸಹಕಾರಿ ಯಾಗುವ ಪ್ರದೇಶಗಳನ್ನು ಹುಡುಕುತ್ತ ಸಾಗುವ ಕೀಟಗಳಾಗಿವೆ.

ಈ ಕೀಟಗಳ ಸ್ಪರ್ಶದಿಂದ ಚರ್ಮ ಕೆಂಪಗಾಗಿ, ವಿಪರೀತ ಉರಿಯಾಗುತ್ತದೆ. ಚರ್ಮದ ಮೇಲೆ ಕುಳಿತಂತ ಸಂದರ್ಭದಲ್ಲಿ ತೀಕ್ಷ್ಣ ವಾದ ಆಮ್ಲೀಯ ವಸ್ತುವನ್ನು ಬಿಡುಗಡೆ ಮಾಡುತ್ತವೆ.