ನವದೆಹಲಿ: ಭಾರತದ ಆರ್ಥಿಕತೆಯ ಬಗ್ಗೆ ತಪ್ಪುದಾರಿಗೆಳೆಯುವ ಅಂಕಿಅಂಶಗಳನ್ನು ಮೋದಿ ಸರ್ಕಾರ ತೋರಿಸುತ್ತಿದೆ ಎಂದು ಕೇಂದ್ರದ ವಿರುದ್ಧ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಆರ್ಥಿಕತೆಯ ಬಗ್ಗೆ ಶೀಘ್ರದಲ್ಲೇ ಅಂಕಿಅಂಶಗಳ ಪುರಾವೆ ನೀಡುವುದಾಗಿ ಹೇಳಿದ್ದಾರೆ.
ಹಿರಿಯ ಬಿಜೆಪಿ ಕಾರ್ಯಾಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರು ಮಂಗಳವಾರ ಕೇಂದ್ರದ ಹೇಳಿಕೆಯನ್ನು ಖಂಡಿಸಿದ್ದು, ಭಾರತದ ಆರ್ಥಿಕ ಅಂಕಿಅಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದ್ದೇನೆ. ‘ಭಾರತದ ಪ್ರಜ್ವಲಿಸುವ ಆರ್ಥಿಕತೆಯ’ ಬಗ್ಗೆ ಮಾತಾಡುವುದು ಆಧಾರರಹಿತವಾಗಿದೆ ಎಂದು ಹೇಳಿದ್ದಾರೆ.
“ಶೀಘ್ರದಲ್ಲೇ ನಾನು ಅಂಕಿ ಅಂಶ ಮುಂದಿಡುತ್ತೇನೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜಿಡಿಪಿಯ ಬೆಳವಣಿಗೆಯ ದರವು ಕರೋನಾದಿಂದ ಚೇತರಿಸಿ ಕೊಳ್ಳುವುದು ಕಮ್ಮಿಯಾಗಿದೆ. ಇದು ನೆಹರೂ ಅವಧಿಗಿಂತ ಕಡಿಮೆಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.