ನವದೆಹಲಿ: ಸಕ್ಕರೆ ರಫ್ತಿನ ಮೇಲಿನ ನಿರ್ಬಂಧವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸಲು ನಿರ್ಧರಿಸ ಲಾಗಿದೆ.
ಎಲ್ಲಾ ತಳಿಯ ಸಕ್ಕರೆಯ ರಫ್ತಿಗೆ ಅಕ್ಟೋಬರ್ 31ರವರೆಗೆ ನಿರ್ಬಂಧ ಇದೆ. ಇದೀಗ ಅದನ್ನು ಅನಿರ್ದಿಷ್ಟಾವಧಿ ಯವರೆಗೆ ಮುಂದುವರಿಸುತ್ತಿರುವುದಾಗಿ ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ ಬುಧವಾರ ಅಧಿಸೂಚನೆ ಯಲ್ಲಿ ತಿಳಿಸಿದೆ.
ಭಾರತದಲ್ಲಿ ಸಕ್ಕರೆ ಬೆಲೆ ಹೆಚ್ಚಿ ಹಣದುಬ್ಬರ ಏರದಂತೆ ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಸಕ್ಕರೆಯನ್ನು ರಫ್ತು ನಿರ್ಬಂಧಿತ ವಸ್ತುಗಳ ಪಟ್ಟಿಗೆ ಸೇರಿಸಿತ್ತು. 2023ರ ಅಕ್ಟೋಬರ್ 31ರ ವರೆಗೂ ಈ ನಿರ್ಬಂಧ ಇದೆ.
ಸಕ್ಕರೆ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತ ವಿಶ್ವದ ಎರಡನೇ ಅತಿ ದೊಡ್ಡ ದೇಶವಾಗಿದೆ. ಮಹಾರಾಷ್ಟ್ರ, ಕರ್ನಾಟಕ ಸಕ್ಕರೆ ಉತ್ಪಾದನೆಯಲ್ಲಿ ಭಾರತದ ಪ್ರಮುಖ ರಾಜ್ಯಗಳಾಗಿವೆ. ಭಾರತದ ಒಟ್ಟು ಸಕ್ಕರೆ ಉತ್ಪಾದನೆ ಯಲ್ಲಿ ಈ ಎರಡು ರಾಜ್ಯಗಳ ಪಾಲು ಅರ್ಧದಷ್ಟಿದೆ.
ಭಾರತೀಯ ಸಕ್ಕರೆ ಕಾರ್ಖಾನೆ ಸಂಸ್ಥೆ ಪ್ರಕಾರ, 2023-24ರ ಸೀಸನ್ನಲ್ಲಿ ಭಾರತದಲ್ಲಿ ಸಕ್ಕರೆ ಉತ್ಪಾದನೆ 31.7 ಮಿಲಿಯನ್ ಟನ್ನಷ್ಟು ಮಾತ್ರವೇ ಸಕ್ಕರೆ ಉತ್ಪಾದನೆ ಆಗಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಕ್ಕರೆ ಉತ್ಪಾದನೆ ಶೇ. 3ಕ್ಕಿಂತಲೂ ಹೆಚ್ಚು ಇಳಿಕೆ ಆಗಬಹುದು ಎನ್ನಲಾಗಿದೆ.
ಈ ಕಾರಣಕ್ಕೆ ಸರ್ಕಾರ ಸಕ್ಕರೆ ರಫ್ತಿಗೆ ನಿರ್ಬಂಧ ಹಾಕಿದೆ.