Saturday, 14th December 2024

ಪಂಜಾಬ್ ಸಿಎಂ ನಿವಾಸದೆದುರು ಪ್ರತಿಭಟನೆ: ಸುಖ್ಬೀರ್ ಸಿಂಗ್ ಬಾದಲ್ ಬಂಧನ

ಮೊಹಾಲಿ: ಪಂಜಾಬ್ ಮುಖ್ಯಮಂತ್ರಿ ನಿವಾಸದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಶಿರೋಮಣಿ ಅಕಾಲಿ ದಳ, ಬಿಎಸ್ಪಿ ನಾಯಕರು ಮತ್ತು ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಜಲಫಿರಂಗಿಗಳನ್ನು ಬಳಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಸರ್ಕಾರ ಫತೇ ಕಿಟ್‌ಗಳ ಖರೀದಿಯಲ್ಲಿ ಅಕ್ರಮಗಳು ಮತ್ತು ಕರೋನಾ ಲಸಿಕೆ ಡೋಸ್ ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಹಂಚಿಸಿದ್ದಾರೆ ಎಂಬ ಆರೋಪಿಸಿ ಎಸ್‌ಎಡಿ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿತ್ತು.

2022ರ ವಿಧಾನಸಭಾ ಚುನಾವಣೆಗೆ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡ ಬಳಿಕ ಎಸ್‌ಎಡಿ ಮತ್ತು ಬಿಎಸ್‌ಪಿ ಜಂಟಿಯಾಗಿ ಮೊದಲ ಪ್ರತಿಭಟನೆ ನಡೆಸಿವೆ. ಇನ್ನು ಪ್ರತಿಭಟನಾ ನಿರತ ಬಾದಲ್ ಮತ್ತು ಬಿಕ್ರಮ್ ಸಿಂಗ್ ಮಜಿತಿಯಾ ಸೇರಿದಂತೆ ಹಲವಾರು ಅಕಾಲಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.