Thursday, 12th December 2024

ಮಾ.16ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್’ಗೆ ಸಮನ್ಸ್ ಜಾರಿ

ವದೆಹಲಿ: 8ನೇ ಸಮನ್ಸ್ ಗೆ ಕೇಜ್ರಿವಾಲ್ ಗೈರಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕೇಜ್ರಿವಾಲಗೆ ಇದೀಗ ದೆಹಲಿ ಕೋರ್ಟ್ ನೋಟಿಸ್ ನೀಡಿದೆ. ದೆಹಲಿ ರೋಸ್ ಅವೆನ್ಯೂ ಕೋರ್ಟ್ನಿಂದ ಮಾ.16ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ರೌಸ್ ಅವೆನ್ಯೂ ಕೋರ್ಟ್ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮಾ.16 ರಂದು ಖುದ್ದಾಗಿ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಜಾರಿ ನಿರ್ದೇಶನಾಲಯ (ED) ಅವರ ವಿರುದ್ಧ ಎರಡನೇ ದೂರನ್ನು ದಾಖಲಿಸಿ ನ್ಯಾಯಾಲಯ ವನ್ನು ಸಂಪರ್ಕಿಸಲಾಗಿತ್ತು. -ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾದ ಸಮನ್ಸ್‌ಗೆ ಗೈರಾಗಿರುವ ಹಿನ್ನೆಲೆ ಇದೀಗ ಸಮನ್ಸ್ ಜಾರಿ ಮಾಡಿದೆ.

ಹಿಂದಿನ ಸಮನ್ಸ್‌ಗಳಿಗೆ ಬದ್ಧರಾಗಿರಲು ವಿಫಲರಾದ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯವು ಹಿಂದಿನ ಕಾನೂನು ಕ್ರಮಗಳ ಹಿನ್ನೆಲೆಯಲ್ಲಿ ಈ ಇತ್ತೀಚಿನ ಬೆಳವಣಿಗೆಯಾಗಿದೆ. ಇಡಿ ನೀಡಿದ ಆರಂಭಿಕ ಮೂರು ಸಮನ್ಸ್‌ಗಳಿಗೆ ಸಂಬಂಧಿಸಿದ ಹಿಂದಿನ ದೂರಿನ ವಿಚಾರಣೆಯನ್ನು ಮಾ.16 ಕ್ಕೆ ನಿಗದಿ ಪಡಿಸಲಾಗಿದೆ.