Saturday, 14th December 2024

ನೃತ್ಯ ವಿಮರ್ಶಕ, ಸಂಶೋಧಕ ಸುನಿಲ್ ಕೊಠಾರಿ ಇನ್ನಿಲ್ಲ

ನವದೆಹಲಿ: ಪದ್ಮಶ್ರೀ ಪುರಸ್ಕೃತ, ನೃತ್ಯ ವಿಮರ್ಶಕ, ಸಂಶೋಧಕ ಸುನಿಲ್ ಕೊಠಾರಿ (87) ಹೃದಯ ಸ್ತಂಭನದಿಂದ ದೆಹಲಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.

ಸುಮಾರು ಒಂದು ತಿಂಗಳ ಹಿಂದೆಯೇ ಕೋವಿಡ್ ಸೋಂಕಿಗೆ ತುತ್ತಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು, ಅವರ ಆರೋಗ್ಯ ಸ್ಥಿತಿ ಉತ್ತಮವಾಗಿರಲಿಲ್ಲ” ಎಂದು ಕುಟುಂಬದ ಆಪ್ತೆ ಮತ್ತು ನರ್ತಕಿ ವಿಧಾ ಲಾಲ್ ಹೇಳಿದ್ದಾರೆ. ಕೊಠಾರಿ ಏಷ್ಯನ್ ಗೇಮ್ಸ್ ವಿಲೇಜ್‌ನ ಮನೆಯಲ್ಲಿ ಆರೋಗ್ಯ ಸಂಬಂಧ ಹೋರಾಟ ನಡೆಸಿದ್ದರೂ ಇಂದು  ಹೃದಯ ಸ್ತಂಭನದ ನಂತರ ಆಸ್ಪತ್ರೆಗೆ ದಾಖಲಾ ಗಿದ್ದರು.

ಡಿಸೆಂಬರ್ 20, 1933 ರಂದು ಮುಂಬೈನಲ್ಲಿ ಜನಿಸಿದ ಕೊಠಾರಿ ಭಾರತೀಯ ನೃತ್ಯ ಪ್ರಕಾರಗಳ ಅಧ್ಯಯನಕ್ಕೆ ಪ್ರಾರಂಭಿಸುವ ಮುನ್ನ ಚಾರ್ಟರ್ಡ್ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೊಠಾರಿ ಅಸ್ಸಾಂನ ಸತ್ಯ ನೃತ್ಯಗಳು, ಭಾರತೀಯ ನೃತ್ಯದಲ್ಲಿ ಹೊಸ ನಿರ್ದೇಶನಗಳು, ಮತ್ತು ಭರತನಾಟ್ಯಂ, ಒಡಿಸ್ಸಿ, ಚೌ, ಕಥಕ್, ಕೂಚುಪುಡಿಮತ್ತು ಉದಯ್ ಶಂಕರ್ ಮತ್ತು ರುಕ್ಮಿಣಿ ದೇವಿ ಅರುಂಡೇಲ್ ಅವರ ಜೀವನಚರಿತ್ರೆ ಸೇರಿದಂತೆ ಭಾರತೀಯ ನೃತ್ಯ ಪ್ರಕಾರಗಳ ವಿಷಯದ ಬಗ್ಗೆ 20 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.

ಭಾರತೀಯ ನೃತ್ಯ ಪ್ರಕಾರಗಳಿಗೆ ನೀಡಿದ ಕೊಡುಗೆಗಾಗಿ ಕೊಠಾರಿ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1995) ಸೇರಿದಂತೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿದೆ.