ಮೀರತ್: ಸ್ಟ್ಯಾಂಡ್ ಅಪ್ ಕಾಮಿಡಿಯನ್ ಮತ್ತು ನಟ(Stand-Up Comedian and Actor) ಸುನಿಲ್ ಪಾಲ್ ಅವರ ಅಪಹರಣ ಪ್ರಕರಣದಲ್ಲಿ ಐವರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರನ್ನು ಹುಡುಕಿ ಕೊಟ್ಟವರಿಗೆ ತಲಾ ₹ 25,000 ಬಹುಮಾನ(₹25,000 Reward) ನೀಡುವುದಾಗಿ ಉತ್ತರ ಪ್ರದೇಶದ(Uttar Pradesh) ಮೀರತ್‌ನ ಪೊಲೀಸರು(Meerut Police) ಮಂಗಳವಾರ(ಡಿ17) ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.(Sunil Pal Kidnap Case)
Sunil Pal kidnapping case: Meerut Police declares ₹25,000 reward on 5 absconding accusedhttps://t.co/glF5rq05BP
— HT Entertainment (@htshowbiz) December 18, 2024
ಸುನಿಲ್ ಪಾಲ್ ಅವರನ್ನು ಕಳೆದ ಕೆಲ ದಿನಗಳ ಹಿಂದೆ ಐವರು ಕಿಡಿಗೇಡಿಗಳು ಅಪಹರಿಸಿದ್ದರು. ಆರೋಪಿಗಳು ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದಾರೆ. ಲವಿ ಪಾಲ್ ಅಲಿಯಾಸ್ ಸುಶಾಂತ್ ಅಲಿಯಾಸ್ ಹಿಮಾಂಶು, ಆಕಾಶ್ ಅಲಿಯಾಸ್ ಗೋಲಾ ಅಲಿಯಾಸ್ ದೀಪೇಂದ್ರ, ಶಿವ, ಅಂಕಿತ್ ಅಲಿಯಾಸ್ ಪಹಾಡಿ ಮತ್ತು ಶುಭಂ ಇವರು ಆರೋಪಿಗಳು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ತಾಡಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಏನಿದು ಪ್ರಕರಣ?
ಸುನಿಲ್ ಪಾಲ್ ಅವರು ಒಂದು ಕಾರ್ಯಕ್ರಮದ ನಿಮಿತ್ತ ಮುಂಬೈನಿಂದ ಹೊರ ಹೋಗುವುದಾಗಿ ತಮ್ಮ ಪತ್ನಿಗೆ ತಿಳಿಸಿದ್ದರು. ಕಾರ್ಯಕ್ರಮ ಮುಗಿದ ಕೂಡಲೇ ಮನೆಗೆ ವಾಪಸ್ ಬರುವುದಾಗಿ ತಿಳಿಸಿ ಹೊರಟಿದ್ದರು. ಆದರೆ ಸುನಿಲ್ ಪಾಲ್ ತಡ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಕಂಗಾಲಾದ ಅವರ ಪತ್ನಿ ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದರು. ಸಂಪರ್ಕಕ್ಕೆ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿ ಸಹಾಯ ಕೇಳಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು, ತಕ್ಷಣವೇ ತನಿಖೆ ಆರಂಭಿಸಿದ್ದರು. ಕೊನೆಗೂ ಪೊಲೀಸರು ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.
20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಕಿಡ್ನ್ಯಾಪರ್ಸ್!
ಸುನಿಲ್ ಪಾಲ್ ಅವರು ಪರಿಸ್ಥಿತಿಯ ಬಗ್ಗೆ ಮಾಧ್ಯಮವೊಂದರಲ್ಲಿ ತೆರೆದಿಟ್ಟಿದ್ದರು. “ಇದು ಪಕ್ಕಾ ಪ್ಲ್ಯಾನ್ಡ್ ಕೃತ್ಯವಾಗಿದೆ. ಡಿಸೆಂಬರ್ 2ರಂದು ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಬಂದಿತ್ತು. ಅವರು ನನಗೆ ಮುಂಗಡವಾಗಿ ಅಡ್ವಾನ್ಸ್ ಕೂಡ ನೀಡಿದ್ದರು. ಅವರು ವಿಮಾನ ನಿಲ್ದಾಣದಲ್ಲಿ ಪಿಕ್ ಅಪ್‌ಗಾಗಿ ಕಾರನ್ನು ಕಳುಹಿಸಿದ್ದಾರೆ. ಆದರೆ ಒಂದು ಗಂಟೆಯ ನಂತರ ಐವರು ಅಪರಿಚಿತರು ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಮತ್ತೊಂದು ವಾಹನದಲ್ಲಿ ಕೂರಿಸಿದರು. ಆಗ ನನಗೆ ತೀರಾ ಕೆಟ್ಟ ಅನುಭವವಾಯಿತು. ಅವರು ನನ್ನನ್ನು ಅಪಹರಿಸಿದ್ದಾರೆ ಎಂದು ನನಗೆ ತಿಳಿಯಿತು. ಅವರು ತಮ್ಮ ಬಳಿ ಶಸ್ತ್ರಾಸ್ತ್ರಗಳಿವೆ ಎಂದು ಹೇಳಿ ಹೆದರಿಸಿದ್ದರು. ಹಾಗಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಲ್ಲಿ ಸುಮಾರು 7-8 ಜನರಿದ್ದರು, ಕೆಲವರು ಕುಡಿದ ಮತ್ತಿನಲ್ಲಿ ನನ್ನ ಮೇಲೆ ಕೂಗಾಡುತ್ತಿದ್ದರು.” ಎಂದು ಅವರು ಹೇಳಿದ್ದರು.
ಮಾತು ಮುಂದುವರಿಸಿದ್ದ ಅವರು, “ಅಪಹರಣಕಾರರು 20 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ನಾನು ಮುಂಬೈನಲ್ಲಿರುವ ಅನೇಕ ಸ್ನೇಹಿತರಿಗೆ ಹಣವನ್ನು ಸಂಗ್ರಹಿಸಲು ಕರೆ ಮಾಡಿದೆ ಮತ್ತು ತನ್ನನ್ನು ಬಿಡುಗಡೆ ಮಾಡಲು 7.5-8 ಲಕ್ಷ ರೂ. ನೀಡುವುದಾಗಿ ಮನವೊಲಿಸಿದೆ. ಇದಕ್ಕೆ ಒಪ್ಪಿದ ಅಪಹರಣಕಾರರು ಹಣ ವರ್ಗಾಯಿಸಿದಾಗ ಅವರು ನನ್ನನ್ನು ಸಂಜೆಯ ವೇಳೆ ಬಿಡುಗಡೆ ಮಾಡಿದ್ದಾರೆ” ಎಂದು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ:Spy Camera: ಶಿಕ್ಷಕಿಯರ ಟಾಯ್ಲೆಟ್‌ನಲ್ಲಿ ಸ್ಪೈ ಕ್ಯಾಮರಾ ಇಟ್ಟ ಕಿಡಿಗೇಡಿ! ಶಾಲೆಯ ನಿರ್ದೇಶಕ ಖಾಕಿ ಬಲೆಗೆ