Sunday, 15th December 2024

ವಿಡಿಯೊ ಕಾನ್ಫರೆನ್ಸ್ ವಿಚಾರಣೆಗೆ ಶರ್ಟ್‌ ಇಲ್ಲದೆ ಬಂದ ವ್ಯಕ್ತಿಗೆ ಸುಪ್ರೀಂ ಛೀಮಾರಿ

ನವದೆಹಲಿ: ವಿಚಾರಣೆ ವೇಳೆ ಶರ್ಟ್ ರಹಿತ ವ್ಯಕ್ತಿ ಕಾಣಿಸಿಕೊಂಡು ಸುಪ್ರೀಂ ಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ಕೋವಿಡ್-19 ಬಂದ ಮೇಲೆ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯುತ್ತಿವೆ. ಹೀಗೆಲ್ಲಾ ಆಗಬಾರದು, ಇಂತಹ ನಡತೆಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ವಿಚಾರಣೆ ವೇಳೆ ಶರ್ಟ್ ರಹಿತ ವ್ಯಕ್ತಿ ವಿಡಿಯೊ ಕಾನ್ಫರೆನ್ಸ್ ನಲ್ಲಿ ಕಾಣಿಸಿಕೊಂಡ ದ್ದಕ್ಕೆ ನ್ಯಾಯಾಧೀಶರಾದ ಎಲ್ ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ ನೇತೃತ್ವದ ನ್ಯಾಯಪೀಠ ಹೇಳಿದೆ.

ಕಳೆದ ಅಕ್ಟೋಬರ್ 26ರಂದು, ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಎದುರು ಸಹ ಇಂತಹದ್ದೇ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿದ್ದಾಗ ಅಡ್ವೊಕೇಟ್ ಒಬ್ಬರು ಶರ್ಟ್ ರಹಿತವಾಗಿ ಕಾಣಿಸಿಕೊಂಡಿದ್ದರು.

ಕಳೆದ ಜೂನ್ ನಲ್ಲಿ ವಕೀಲರೊಬ್ಬರು ಟಿ ಶರ್ಟ್ ಧರಿಸಿಕೊಂಡು ಬೆಡ್ ಮೇಲೆ ಮಲಗಿಕೊಂಡು ವಿಡಿಯೊ ಕಾನ್ಫರೆನ್ಸ್ ನಲ್ಲಿ ಭಾಗಿ ಯಾಗಿದ್ದರು. ಏಪ್ರಿಲ್ ನಲ್ಲಿ ವಕೀಲರೊಬ್ಬರು ಜಾಮೀನು ಅರ್ಜಿ ವಿಚಾರಣೆ ವೇಳೆ ಈ ರೀತಿ ಕಾಣಿಸಿಕೊಂಡಿದ್ದಕ್ಕೆ ರಾಜಸ್ತಾನ ಹೈಕೋರ್ಟ್ ನ ಕೆಂಗಣ್ಣಿಗೆ ಗುರಿಯಾಗಿದ್ದರು. ವಿಚಾರಣೆ ವೇಳೆ ಸರಿಯಾದ ಯೂನಿಫಾರ್ಮ್ ನಲ್ಲಿ ಕಾಣಿಸಿಕೊಂಡದ್ದಕ್ಕೆ ಹೈಕೋರ್ಟ್ ಟೀಕಿಸಿತ್ತು.