Sunday, 15th December 2024

ಕೇಂದ್ರ ಸರ್ಕಾರದ ವಿಸ್ಟಾ ಪ್ರಾಜೆಕ್ಟ್‌ಗೆ ಸುಪ್ರೀಂಕೋರ್ಟ್ ಷರತ್ತುಬದ್ದ ಅನುಮತಿ

ನವದೆಹಲಿ: ಬೃಹತ್ ಸಂಸತ್ ಭವನ ಒಳಗೊಂಡಂತೆ ವಿವಿಧ ಯೋಜನೆಗಳನ್ನು ನಿರ್ಮಿಸುವ ಕೇಂದ್ರ ಸರ್ಕಾರದ ವಿಸ್ಟಾ ಪ್ರಾಜೆಕ್ಟ್‌ಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ.

ಸರ್ಕಾರ ಮತ್ತು ಸೆಂಟ್ರಲ್ ವಿಸ್ಟಾ ಸಮಿತಿಯ ಯೋಜನೆಗೆ ಅನುಮತಿ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅನೇಕರು, ಅದರ ಪಾರದರ್ಶಕತೆಯನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿದ್ದರು. ನ್ಯಾಯಮೂರ್ತಿ ಎಎಂ ಖನ್ವಿಲ್ಕರ್ ನೇತೃತ್ವದಲ್ಲಿ ನ್ಯಾಯಮೂರ್ತಿ ಗಳಾದ ದಿನೇಶ್ ಮಾಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ಮೂವರು ಸದಸ್ಯರ ನ್ಯಾಯಪೀಠ ಈ ಆದೇಶ ನೀಡಿದೆ.

ಯೋಜನೆಯ ಬಿಡ್ಡಿಂಗ್, ನೇಮಕಾತಿ ಮತ್ತು ಸಲಹೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ನೋಟಿಸ್‌ಗಳನ್ನು ಸುಪ್ರೀಂಕೋರ್ಟ್ ಅನುಮೋದಿಸಿತು.

ನಿರ್ಮಾಣ ಸ್ಥಳಗಳಲ್ಲಿ ದೂಳು ಮತ್ತು ಹೊಗೆ ನಿಗ್ರಹ ಗನ್‌ಗಳನ್ನು ಅಳವಡಿಸಬೇಕು ಮತ್ತು ಸ್ಮಾಗ್ ಟವರ್‌ ಸ್ಥಾಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಖನ್ವಿಲ್ಕರ್ ಮತ್ತು ದಿನೇಶ್ ಮಾಹೇಶ್ವರಿ ಹೇಳಿದರು. ಯೋಜನೆ ನಡೆಸುವ ವಿಚಾರಕ್ಕೆ ಸಂಜೀವ್ ಖನ್ನಾ ಕೂಡ ಅನುಮತಿ ನೀಡಿದರು.