Thursday, 12th December 2024

‌Bulldozer Justice: ʼಬುಲ್‌ಡೋಜರ್‌ ನ್ಯಾಯʼ ನಿಲ್ಲಿಸಿ: ಸುಪ್ರೀಂ ಕೋರ್ಟ್

supreme court

ನವದೆಹಲಿ: ತನ್ನ ಅನುಮತಿಯಿಲ್ಲದೆ ದೇಶದಲ್ಲಿ ಯಾವುದೇ ಕಟ್ಟಡ ನೆಲಸಮ (Bulldozer Justice) ಕಾರ್ಯ ನಡೆಯಬಾರದು ಎಂದು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಆದೇಶ ನೀಡಿದೆ. ಅಕ್ಟೋಬರ್ 1 ರವರೆಗೆ “ಬುಲ್ಡೋಜರ್ ನ್ಯಾಯ”ವನ್ನು ಕೋರ್ಟ್‌ ಸ್ಥಗಿತಗೊಳಿಸಿದೆ. ಆದರೆ ಸಾರ್ವಜನಿಕ ರಸ್ತೆಗಳು, ಕಾಲುದಾರಿಗಳು, ಜಲಮೂಲಗಳು ಮತ್ತು ರೈಲ್ವೆ ಹಳಿಗಳ ಮೇಲಿನ ಅನಧಿಕೃತ ಕಟ್ಟಡಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮುಂದಿನ ವಿಚಾರಣೆ ನಡೆಯುವವರೆಗೆ ಕಾನೂನುಬಾಹಿರವಾಗಿ ಯಾವುದೇ ಕಟ್ಟಡ ಉರುಳಿಸುವಂತಿಲ್ಲ. ಅಂತ ಯಾವುದೇ ನಿದರ್ಶನವಿದ್ದರೂ ಅದು ಸಂವಿಧಾನದ ನೀತಿಗೆ ವಿರುದ್ಧ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.

ಹಲವಾರು ರಾಜ್ಯಗಳಲ್ಲಿ ಅಪರಾಧದ ಆರೋಪಿಗಳ ಆಸ್ತಿಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ಬ್ಯಾಚ್ ಅನ್ನು ಕೋರ್ಟ್‌ ವಿಚಾರಣೆ ನಡೆಸುತ್ತಿದೆ. ಆಸ್ತಿಗಳನ್ನು ಧ್ವಂಸ ಮಾಡುವ ಕುರಿತು ಕತೆ ಕಟ್ಟಲಾಗುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. “ಹೊರಗಿನ ನಿರೂಪಣೆ ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ” ಎಂದು ಪೀಠ ಅವರಿಗೆ ತಿಳಿಸಿತು.

ನಿರ್ದಿಷ್ಟ ಧಾರ್ಮಿಕ ಸಮುದಾಯದ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ ಎಂದು ಮೆಹ್ತಾ ಹೇಳಿದರು. ಮಧ್ಯಪ್ರದೇಶದಲ್ಲಿ ಈ ವಿಧಾನ ಅನುಸರಿಸಿ 70 ಅಂಗಡಿಗಳನ್ನು ಕೆಡವಲಾಗಿದೆ. “ಆದರೆ ಕೆಡವಿದ ಕಟ್ಟಡಗಳಲ್ಲಿ 50ಕ್ಕೂ ಹೆಚ್ಚು ಮಂದಿ ಹಿಂದೂಗಳದು” ಎಂದು ವಾದಿಸಿದರು.

ಇದನ್ನೂ ಓದಿ: Kolkata Doctor Murder: ʻವೈದ್ಯೆಯರಿಗೆ ಭದ್ರತೆ ಕೊಡುವುದಷ್ಟೇ ನಿಮ್ಮ ಕೆಲಸ…ʼ ದೀದಿ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಫುಲ್‌ ಕ್ಲಾಸ್‌