ನವದೆಹಲಿ: ಬಿಲ್ಕಿಸ್ ಬಾನೊ ಪ್ರಕರಣದಲ್ಲಿ (Bilkis Bano Case) ಗುಜರಾತ್ ಸರ್ಕಾರದ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಜನರನ್ನು ಶೀಘ್ರವಾಗಿ ಬಿಡುಗಡೆ ಮಾಡಿರುವ ವಿಷಯವೂ ಈ ಅರ್ಜಿಯಲ್ಲಿ ಒಳಗೊಂಡಿತ್ತು. ಇದರೊಂದಿಗೆ ಗುಜರಾತ್ ಸರ್ಕಾರಕ್ಕೆ ಮತ್ತೊಂದು ಬಾರಿ ಹಿನ್ನಡೆಯಾಗಿದೆ.
ಸುಪ್ರೀ ಕೋರ್ಟ್ ಈ ಪ್ರಕರಣ ಕುರಿತು ನೀಡಿರುವ ತಿರ್ಪಿನಲ್ಲಿ ಕೆಲವು ಅಂಶಗಳನ್ನು ತೆಗೆದುಹಾಕುವಂತೆ ಗುಜರಾತ್ ಸರ್ಕಾರ ಮಾಡಿದ ಮನವಿ ಆಧಾರರಹಿತವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ವ್ಯವಸ್ಥೆಯ ಲೋಪವನ್ನು ಬಳಸಿಕೊಂಡ ವೈಯಕ್ತಿಯ ಅಪರಾಧಿಗಳ ಜತೆ ಕೋರ್ಟ್ ಸಮನ್ವಯದಿಂದ ವರ್ತಿಸಿದೆ ಎಂದು ಸುಪ್ರೀಂ ಕೋರ್ಟ್ ತನ್ನತೀರ್ಪಿನಲ್ಲಿ ತಿಳಿಸಿದೆ.
ನ್ಯಾಯಾಲಯದ ತೀರ್ಪುಗಳು ಸಂಪೂರ್ಣವಾಗಿ ಪಕ್ಷಪಾತದಿಂದ ಕೂಡಿವೆ ಮತ್ತು ರಾಜ್ಯದ ವ್ಯವಹಾರಗಳನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಗುಜರಾತ್ ಸರ್ಕಾರ ವಾದಿಸಿತ್ತು. ಈ ಹೇಳಿಕೆಗಳು ಸೂಕ್ತವಲ್ಲ ಎಂದು ವಿಚಾರಣೆ ವೇಳೆ ಕೋರ್ಟ್ ಅಭಿಪ್ರಾಯಪಟ್ಟಿದೆ.
ಮರುಪರಿಶೀಲನಾ ಅರ್ಜಿಗಳು, ಪ್ರಶ್ನಿಸಲಾದ ಆದೇಶ ಮತ್ತು ಅದರೊಂದಿಗೆ ಲಗತ್ತಿಸಲಾದ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಮರುಪರಿಶೀಲನಾ ಅರ್ಜಿಗಳಲ್ಲಿ ದಾಖಲೆಯನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಯಾವುದೇ ದೋಷ ಇಲ್ಲ. ಅದರಂತೆ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ನ್ಯಾಯಪೀಠ ತಿಳಿಸಿದೆ.