ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ನೀಡಿ ನಿವೃತ್ತರಾಗಿದ್ದ ಸಿಬಿಐ ಕೋರ್ಟ್ನ ವಿಶೇಷ ನ್ಯಾಯಾಧೀಶ ಎಸ್.ಕೆ . ಯಾದವ್ರಿಗೆ ಭದ್ರತಾ ಅವಧಿ ಮುಂದುವರಿಸುವುದಕ್ಕೆ ಸುಪ್ರೀಂ ಕೋರ್ಟ್ ಅಸಮ್ಮತಿ ಸೂಚಿಸಿದೆ.
ನಿವೃತ್ತ ನ್ಯಾಯಾಧೀಶ ಎಸ್.ಕೆ.ಯಾದವ್”ರಿಗೆ ಭದ್ರತೆ ಅವಶ್ಯಕತೆ ಇದೆ ಎಂದು ಎನಿಸುತ್ತಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.
2005ರಿಂದ ಬಾಬ್ರಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಎಸ್.ಕೆ.ಯಾದವ್ 2019ರಲ್ಲೇ ತಮ್ಮ ಸೇವೆಯಿಂದ ನಿವೃತ್ತಿ ಹೊಂದಿ ದ್ದರು. ಆದರೆ ಕೋರ್ಟ್ ಇವರ ಸೇವಾ ಅವಧಿಯನ್ನ ಮುಂದುವರಿಸಿತ್ತು. ಹೀಗಾಗಿ ಬಾಬರಿ ಮಸೀದಿ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ , ಮುರಳಿ ಮನೋಹರ ಜೋಷಿ ಸೇರಿದಂತೆ ಹಲವು ನಾಯಕರನ್ನ ಪ್ರಕರಣದಿಂದ ಖುಲಾಸೆ ಗೊಳಿಸಿದ್ದ ಯಾದವ್ ತೀರ್ಪು ಪ್ರಕಟಿಸಿದ ದಿನವೇ ನಿವೃತ್ತಿ ಪಡೆದಿದ್ದರು.
ಬಾಬರಿ ಮಸೀದಿ ಧ್ವಂಸ ಪ್ರಕರಣ ಅತ್ಯಂತ ಸೂಕ್ಷ್ಮ ಪ್ರಕರಣವಾದ್ದರಿಂದ ತಮಗೆ ಭದ್ರತೆ ಮುಂದುವರಿಸುವಂತೆ ಎಸ್.ಕೆ. ಯಾದವ್ ಕೋರ್ಟ್ಗೆ ಮನವಿ ಮಾಡಿದ್ದರು.