Monday, 16th September 2024

ವಿಕಲಚೇತನ ಸಾಕು ಮಕ್ಕಳೊಂದಿಗೆ ಕೋರ್ಟಿಗೆ ಆಗಮಿಸಿದ ಸಿಜೆಐ ಚಂದ್ರಚೂಡ್

ವದೆಹಲಿ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ತಮ್ಮ ಇಬ್ಬರು ವಿಕಲಚೇತನ (ಸಾಕು ಮಕ್ಕಳು) ಪುತ್ರಿಯರ ಜೊತೆ ಕೋರ್ಟ್ ಗೆ ಆಗಮಿ ಸಿದ್ದು, ಶುಕ್ರವಾರ ಹಿರಿಯ ನ್ಯಾಯಾಧೀಶರು, ವಕೀಲರು ಅಚ್ಚರಿಗೆ ಕಾರಣ ವಾಯಿತು.

ಬೆಳಗ್ಗೆ ಸುಪ್ರೀಂಕೋರ್ಟ್ ಆವರಣ ಪ್ರವೇಶಿಸಿದ್ದ ಸಿಜೆಐ ಚಂದ್ರಚೂಡ್ ಅವರು ಸಾರ್ವ ಜನಿಕ ಗ್ಯಾಲರಿಯಿಂದ ತಮ್ಮ ಇಬ್ಬರು ವಿಕಲಚೇತನ ಪುತ್ರಿಯರ ಜತೆ ಕೋರ್ಟ್ ರೂಂಗೆ ಪ್ರವೇಶಿಸಿದ್ದರು.

ಪುತ್ರಿಯರನ್ನು ಕೊಠಡಿ ಸಂಖ್ಯೆ 1ರಲ್ಲಿದ್ದ ಸಿಜೆಐ ಕೋರ್ಟ್ ಗೆ ಕರೆದೊಯ್ದು ನ್ಯಾಯಾಲ ಯದ ಕಾರ್ಯವೈಖರಿಯನ್ನು ವಿವರಿಸಿದ್ದರು. ಸಿಜೆಐ ಚಂದ್ರಚೂಡ್ ಅವರು ತಮ್ಮ ಪುತ್ರಿ ಯರಾದ ಮಹಿ (16 ವರ್ಷ) ಮತ್ತು ಪ್ರಿಯಾಂಕಾ (20ವರ್ಷ) ಅವರಿಗೆ ನ್ಯಾಯಾಧೀಶರು ಎಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ವಕೀಲರು ಎಲ್ಲಿ ನಿಂತು ವಾದ ಮಂಡಿಸುತ್ತಾರೆ ಎಂಬು ದನ್ನು ತೋರಿಸಿರುವು ದಾಗಿ ವರದಿ ತಿಳಿಸಿದೆ. ನಂತರ ಸಿಜೆಐ ಚಂದ್ರಚೂಡ್ ಅವರು ಇಬ್ಬರು ಸಾಕು ಮಕ್ಕಳನ್ನು ತಮ್ಮ ಕೊಠಡಿಗೆ ಕರೆ ದೊಯ್ದು ವಿವರಣೆ ನೀಡಿದ್ದರು.

ಮೂಲ ಗಳ ಪ್ರಕಾರ, ಸುಪ್ರೀಂಕೋರ್ಟ್ ಹೇಗಿದೆ ಎಂಬುದನ್ನು ಪ್ರತ್ಯಕ್ಷವಾಗಿ ನೋಡಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದರಿಂದ ಸಿಜೆಐ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಸುಪ್ರೀಂಕೋರ್ಟ್ ಗೆ ಕರೆತರಲು ನಿರ್ಧರಿಸಿದ್ದರು ಎಂದು ವರದಿ ತಿಳಿಸಿದೆ.

Read E-Paper click here