Thursday, 12th December 2024

ಮೋದಿ ಹುಟ್ಟುಹಬ್ಬಕ್ಕೆ ಸೂರತ್‌ನಲ್ಲಿ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಆಟೋ ಸೇವೆ

ಗುಜರಾತ್:‌ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬ. ರಾಜಕೀಯ ಮುಖಂಡರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಮೋದಿ 73ನೇ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಕೋರಿದ್ದಾರೆ.

ಪಕ್ಷ ಹಾಗೂ ಕಾರ್ಯಕರ್ತರು ತನ್ನ ನೆಚ್ಚಿನ ನಾಯಕನ ಹುಟ್ಟುಹಬ್ಬಕ್ಕೆ ವಿವಿಧ ಸಾಮಾಜಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಗುಜರಾತ್‌ನ ಸೂರತ್‌ನಲ್ಲಿ ಸುಮಾರು 1,000 ಆಟೋ ಚಾಲಕರು ಪಿಎಂ ಮೋದಿ ಅವರ ಹುಟ್ಟುಹಬ್ಬಕ್ಕೆ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಆಟೋ ಸೇವೆ ನೀಡಲು ಮುಂದಾಗಿದ್ದಾರೆ.

ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಈ ಘೋಷಣೆ ಮಾಡಿದ್ದು, ಆಟೋ ರಿಕ್ಷಾ ಚಾಲಕರ ಉದಾರ ಕಾರ್ಯಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

“1,000 ಆಟೋ ರಿಕ್ಷಾ ಚಾಲಕರು ಪ್ರಧಾನಿ ಮೋದಿಯವರ ಜನ್ಮದಿನದಂದು ಶೇ.30 ರಷ್ಟು ರಿಯಾಯಿತಿ ಘೋಷಿಸಿದ್ದಾರೆ.

ಆಟೋ ಚಾಲಕರಲ್ಲಿ ಸಾವಿರ ಮಂದಿ ಶೇ.30 ರಷ್ಟು ರಿಯಾಯಿತಿ ನೀಡುವುದಾಗಿ ಹೇಳಿದ್ದು, 73 ಆಟೋ ಚಾಲಕರು ಮೋದಿ ಹುಟ್ಟುಹಬ್ಬದಂದು ಒಂದು ಪೈಸೆಯನ್ನು ತೆಗೆದುಕೊಳ್ಳದೇ ಇಡೀ ದಿನ ಗ್ರಾಹಕರಿಗೆ ಉಚಿತವಾಗಿ ಆಟೋ ಸೇವೆ ನೀಡುವುದಾಗಿ ಹೇಳಿದ್ದಾರೆ.

ಪ್ರಧಾನ ಮಂತ್ರಿಯವರ ಜನ್ಮದಿನದಂದು, ಬಿಜೆಪಿಯು ‘ಸೇವಾ ಪಖ್ವಾರಾ’ ಎಂಬ ಎರಡು ವಾರಗಳ ಅಭಿಯಾನವನ್ನು ಆರಂಭಿಸಲಿದೆ.

ತಮ್ಮ ಹುಟ್ಟುಹಬ್ಬದಂದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ “ಪಿಎಂ ವಿಶ್ವಕರ್ಮ” ಯೋಜನೆಗೆ ಚಾಲನೆ ನೀಡಲಿದ್ದಾರೆ.