Monday, 16th September 2024

ಶಿಕ್ಷೆಗೆ ತಡೆ ನೀಡಲು ಸೂರತ್ ನ್ಯಾಯಾಲಯ ನಕಾರ

ಸೂರತ್: ರ್ನಾಟಕದ ಕೋಲಾರದಲ್ಲಿ ಮೋದಿ ಪದನಾಮದ ಕುರಿತು ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಗುಜರಾತಿನ ಸೂರತ್ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಜೈಲಿನಿಂದ ಶಿಕ್ಷೆಗೊಳಗಾದ ಕಾರಣಕ್ಕೆ ರಾಹುಲ್ ಗಾಂಧಿಯವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದ್ದು, ಹೀಗಾಗಿ ತಮಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯನ್ನು ತೊರೆದು ತಮ್ಮ ತಾಯಿ ಸೋನಿಯಾ ಗಾಂಧಿಯವರ ನಿವಾಸಕ್ಕೆ ತೆರಳಿದ್ದಾರೆ.

ಜೈಲು ಶಿಕ್ಷೆಗೆ ತಡೆ ನೀಡುವಂತೆ ಸೂರತ್ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಿದ್ದು, ಇದನ್ನು ನ್ಯಾಯಾಲಯ ತಿರಸ್ಕರಿಸಿದೆ. ಶಿಕ್ಷೆಗೆ ತಡೆ ನೀಡಲು ನ್ಯಾಯಾಲಯ ನಕಾರ ವ್ಯಕ್ತಪಡಿಸಿರುವ ಕಾರಣ ರಾಹುಲ್ ಮೇಲ್ಮನವಿ ಸಲ್ಲಿಸಬೇಕಿದೆ.