Saturday, 14th December 2024

ತ್ರಿಶ್ಶೂರ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸುರೇಶ್‌ ಗೋಪಿ ಗೆಲುವು

ಕೇರಳ: ಸಿಪಿಐ ಪ್ರಾಬಲ್ಯವಿರುವ ಕೇರಳದ ತ್ರಿಶ್ಯೂರ್​ನಲ್ಲಿಯೂ ಬಿಜೆಪಿಯ ಅಭ್ಯರ್ಥಿಯು ಭರ್ಜರಿ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಖಾತೆ ತೆರೆದಿದೆ.

ತ್ರಿಶ್ಶೂರ್‌ ಕ್ಷೇತ್ರದಿಂದ ಸ್ಪರ್ಧಿಸಿರುವ ನಟ ಹಾಗೂ ಬಿಜೆಪಿ ಅಭ್ಯರ್ಥಿ ಸುರೇಶ್‌ ಗೋಪಿ ಗೆಲುವಿನ ನಗೆ ಬೀರಿದ್ದಾರೆ. ಗೋಪಿ ಅವರು 396881 ಮತಗಳನ್ನು ಪಡೆದು 73120 ಮತಗಳಿಂದ ಲೀಡ್​​​ನಲ್ಲಿದ್ದಾರೆ.

ತಮಿಳುನಾಡಿನ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಡಿಎಂಕೆಯ ಅಭ್ಯರ್ಥಿ ಗಣಪತಿ ರಾಜ್‌ ಕುಮಾರ್‌ ಅಣ್ಣಾಮಲೈ ಅವರನ್ನು 17,366 ಮತಗಳಿಂದ ಸೋಲಿನ ರುಚಿ ತೋರಿಸಿದ್ದಾರೆ.