Sunday, 19th May 2024

ಸೂರ್ಯ ನಮಸ್ಕಾರಕ್ಕೆ ಜಮ್ಮು-ಕಾಶ್ಮೀರದ ರಾಜಕೀಯ ಮುಖಂಡರ ವಿರೋಧ

ಶ್ರೀನಗರ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ದೊಡ್ಡ ಮಟ್ಟದಲ್ಲಿ ವರ್ಚುವಲ್ ಆಗಿ ಸೂರ್ಯ ನಮಸ್ಕಾರ ಮಾಡುವಂತೆ ಕಾಲೇಜುಗಳಿಗೆ ಜಮ್ಮು ಮತ್ತು ಕಾಶ್ಮೀರದ ಆಡಳಿತವು ನಿರ್ದೇಶನ ನೀಡಿರುವುದು ವಿವಾದಕ್ಕೀಡಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಈ ಕ್ರಮವನ್ನು ವಿರೋಧಿಸಿ ದ್ದಾರೆ.

ಯೋಗ ಸೇರಿದಂತೆ ಯಾವುದನ್ನಾದರೂ ಮಾಡಲು ಮುಸ್ಲಿಂ ವಿದ್ಯಾರ್ಥಿಗಳನ್ನು ಏಕೆ ಒತ್ತಾಯಿ ಸಬೇಕು? ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಈದ್ ಆಚರಿಸುವಂತೆ ಇದಕ್ಕೆ ಸಮಾನವಾದ ಆದೇಶ ನೀಡಿದರೆ ಬಿಜೆಪಿಗೆ ಸಂತೋಷವಾಗುತ್ತದೆಯೇ ?’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ನಾಯಕ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.

error: Content is protected !!